ಹುಣಸೂರು: ಬಿಜೆಪಿ, ಜೆಡಿಎಸ್ ಹೊಂದಾಣಿಕೆ, ಜಾತಿ ಸಮೀಕರಣ ಮತ್ತು ಕಾಂಗ್ರೆಸ್‌ನ ವಿರುದ್ಧ ಅಪಪ್ರಚಾರದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇನೆ ಎಂದು ಎಂ. ಲಕ್ಷಣ್ ಹೇಳಿದರು.
ಚುನಾವಣೆಯ ಸೋಲಿಗೆ ಯಾರನ್ನೂ ಹೊಣೆ ಮಾಡದೆ, ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಸಮಸ್ಯೆಗಳಿಗೆ ಧ್ವನಿಯಾಗುವುದಾಗಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಹೇಳಿದರು.
ಮುಂಬರುವ ಜಿ.ಪಂ, ತಾ.ಪಂ. ಚುನಾವಣೆ ದೃಷ್ಟಿಯಿಂದ ಕಾರ್ಯಕರ್ತರು ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಜಿ.ಪಂ ಮಾಜಿ ಸದಸ್ಯ ಕುನ್ನೇಗೌಡ, ಪುಟ್ಟರಾಜು, ಎಸ್.ಜಯರಾಂ, ಅಣ್ಣಯ್ಯನಾಯಕ ಇತರರು ಇದ್ದರು.