ಗುಂಡ್ಲುಪೇಟೆ: ಆಹಾರ ಅರಸಿ ಕಾಡಿನಿಂದ ಹೊರಬಂದು ಬೀದಿನಾಯಿಗಳ ದಾಳಿಗೆ ಸಿಲುಕಿದ್ದ ಜಿಂಕೆಯನ್ನು ಸಂಘಟನೆಯೊಂದರ ಸದಸ್ಯರು ರಕ್ಷಿಸಿ ಅರಣ್ಯ ಇಲಾಖೆಯ ವಶಕ್ಕೆ ನೀಡಿದ್ದಾರೆ.
ರಾತ್ರಿ ದಾರಿತಪ್ಪಿ ಪಟ್ಟಣಕ್ಕೆ ಬಂದಿದ್ದ ಸುಮಾರು ಐದು ವರ್ಷ ಪ್ರಾಯದ ಹೆಣ್ಣು ಜಿಂಕೆ ಸದ್ಯ ಅರಣ್ಯ ಇಲಾಖೆಯ ವಶದಲ್ಲಿದೆ.
ಭಾನುವಾರ ಸಂಜೆ 5 ಗಂಟೆ ಸುಮಾರಿನಲ್ಲಿ ತಾಲೂಕು ಕಚೇರಿ ಎದುರಿನ ನಿರ್ಜನ ಪ್ರದೇಶದ ಪೊದೆಗಳ ನಡುವೆ ಇದ್ದ ಜಿಂಕೆಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ನಾಯಿಗಳಿಂದ ತಪ್ಪಿಸಿಕೊಳ್ಳಲು ಸಮೀಪದ ಪುರಸಭೆ ಆವರಣಕ್ಕೆ ಓಡಿಬಂದ ಜಿಂಕೆಯನ್ನು ಕಂಡ ಕರ್ನಾಟಕ ಕಾವಲು ಪಡೆಯ ಸದಸ್ಯರು ರಕ್ಷಿಸಿ ಬರ್ ವಲಯದ ಅಕಾರಿಗಳ ವಶಕ್ಕೆ ನೀಡಿದರು.
ನಾಯಿಗಳ ದಾಳಿಯಿಂದ ಜಿಂಕೆಯ ಕುತ್ತಿಗೆಗೆ ಗಾಯವಾಗಿದ್ದು ಚಿಕಿತ್ಸೆ ಕೊಡಿಸಿದ ನಂತರ ಅರಣ್ಯಕ್ಕೆ ಬಿಡಲಾಗುತ್ತದೆ ಎಂದು ಅಕಾರಿಗಳು ತಿಳಿಸಿದ್ದಾರೆ.