Deepika Padukone: ಇತ್ತೀಚೆಗಷ್ಟೇ ತೆಲುಗು ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸ್ಪಿರಿಟ್’ ಚಿತ್ರದಿಂದ ಹೊರನಡೆದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಇದೀಗ ಪ್ರಭಾಸ್ ಅಭಿನಯದ ಮತ್ತೊಂದು ಸಿನಿಮಾ ಕಲ್ಕಿ-2 ಚಿತ್ರದಿಂದಲೂ ಹೊರಹೋಗಲಿದ್ದಾರೆ ಎಂಬ ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡಿವೆ. ಹಲವು ಷರತ್ತುಗಳು ಮತ್ತು ದುಬಾರಿ ಮೊತ್ತದ ಸಂಭಾವನೆ ಕಾರಣ ದೀಪಿಕಾರನ್ನು ತಮ್ಮ ಚಿತ್ರದಲ್ಲಿ ಮುಂದುವರಿಸಲು ಸಂದೀಪ್ ಇಚ್ಛಿಸಲಿಲ್ಲ. ಹೀಗಾಗಿ ಅವರನ್ನು ಸ್ಪಿರಿಟ್ನಿಂದ ತೆಗೆದುಹಾಕಿದರು. ಈ ವಿಚಾರ ಎರಡೂ ಚಿತ್ರೋದ್ಯಮದಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಇದು ಮಾಸುವ ಮುನ್ನವೇ ಇದೀಗ ಮತ್ತೊಂದು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
ಇದನ್ನೂ ಓದಿ: Chandrachud Interview | ಹಳಿ ತಪ್ಪಿದ್ಯಾ ನಟಿಯರ ಶ್ರೀಲಂಕಾ ಭೇಟಿ? ಕಿಚ್ಚು ಹಚ್ಚಿಸ್ತು ಚಂದ್ರಚೂಡ್ ಹೇಳಿಕೆ..!
ದುಬಾರಿ ಮೊತ್ತದ ಸಂಭಾವನೆ ಮತ್ತು ಚಿತ್ರದ ಲಾಭದ ಪಾಲು ಕೇಳಿದ ಹಿನ್ನೆಲೆ ದೀಪಿಕಾರನ್ನು ಚಿತ್ರದಿಂದ ತೆಗೆದುಹಾಕಲು ಸಂದೀಪ್ ಕಠಿಣ ನಿರ್ಧಾರ ಕೈಗೊಂಡರು. ಆದ್ರೆ, ಪ್ರಭಾಸ್ 'ಕಲ್ಕಿ-2' ಚಿತ್ರದಿಂದ ಅವರನ್ನು ತೆಗೆದುಹಾಕಲು ಕಾರಣವೇನು ಎಂಬ ಪ್ರಶ್ನೆಗೆ ನಿಗದಿತ ಸಮಯ ಎನ್ನಲಾಗಿದೆ. ತಾಯ್ತನದ ಕಾರಣ ನಿಗದಿತ ಸಮಯಕ್ಕೆ ಮಾತ್ರ ತಾನು ಸೀಮಿತ ಎಂದಿರುವ ದೀಪಿಕಾರ ನಿರ್ಧಾರ ಚಿತ್ರತಂಡಕ್ಕೆ ಕೊಂಚ ಇರಿಸು-ಮುರಿಸು ತಂದಿದೆ ಎನ್ನಲಾಗಿದೆ.
ಇದು ಚಿತ್ರೀಕರಣಕ್ಕೆ ಸಮಸ್ಯೆ ಉಂಟುಮಾಡುತ್ತಿದೆ ಎಂದು ಹೇಳಲಾಗಿದೆ. ಈ ಕಾರಣಗಳಿಂದ ಅವರನ್ನು 'ಕಲ್ಕಿ-2' ಚಿತ್ರದಿಂದ ಕೈಬಿಡಲು ಚಿತ್ರತಂಡ ನಿರ್ಧರಿಸಿರುವುದಾಗಿ ಸಿನಿ ವರದಿಗಳು ಉಲ್ಲೇಖಿಸಿವೆ. ಆದರೆ ಈ ಕುರಿತಂತೆ ಚಿತ್ರತಂಡ ಆಗಲಿ ಅಥವಾ ನಟಿಯಿಂದಾಗಲಿ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).