DipikaPadukone : ಹಾಲಿವುಡ್ ನಟಿ ದೀಪಿಕಾ ಪಡುಕೋಣೆ ಕನ್ನಡ ಚಿತ್ರರಂಗವಲ್ಲದೇ ಹಲವಾರು ಚಿತ್ರರಂಗದಲ್ಲಿ ಸಾಧನೆ ಮಾಡುತ್ತಿರುವ ಕಲಾವಿದೆ. ಇವರು ತಮ್ಮ ಚಿತ್ರಗಳಲ್ಲಿ ಪ್ರತಿಯೊಂದು ಪಾತ್ರಕ್ಕೂ ಜೀವತುಂಬಿ ನಟಿಸಿದ್ದಲ್ಲದೇ, ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ದೀಪಿಕಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವಂತಹ ಸೆಲೆಬ್ರಿಟಿ ಬರೋಬ್ಬರಿ 80 ಮಿಲಿಯನ್ಗಳಷ್ಟು ಫಾಲೋವರ್ಸ್ಗಳಿದ್ದಾರೆ. ಇವರು ತಮ್ಮ ಚಿತ್ರಗಳು, ಸಿನಿಮಾಗಳ ಬಗ್ಗೆ ಮಾಹಿತಿ, ಫೋಟೋಶೂಟ್ ಹಾಗೂ ಜಾಹೀರಾತನ್ನು ಸಹ ಹಂಚಿಕೊಳ್ಳುತ್ತಾರೆ. ಆದರೆ, ಇತ್ತೀಚಿಗೆ ಹಂಚಿಕೊಂಡ ರೀಲ್ಸ್ ಒಂದು ವೀವ್ಸ್ ವಿಚಾರದಲ್ಲಿ ದಾಖಲೆ ಸೃಷ್ಟಿಸಿದ್ದು, ನೆಟ್ಟಿಗರು ಬೆರಗಾಗಿದ್ದಾರೆ.
ಇದನ್ನೂ ಓದಿ: ಎನ್ಎಸ್ಕ್ಯೂ ಔಷಧ ನಿರ್ಬಂಧಕ್ಕೆ ಆ್ಯಪ್
ದೀಪಿಕಾ ಹಲವಾರು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವಂತ ನಟಿ. ಅದೇ ರೀತಿಯಲ್ಲಿ ಹಿಲ್ಟನ್ ಎಂಬ ಹೋಟೆಲ್ನ ರಾಯಭಾರಿಯಾಗಿ ಕಾಣಿಸಿಕೊಂಡಿದ್ದು, ಜೂನ್ 9ರಂದು ಹೋಟೆಲ್ಗೆ ಸಂಬಂಧಿಸಿದ ಜಾಹಿರಾತು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ರೀಲ್ಸ್ ಹಂಚಿಕೊಂಡ 8 ವಾರಗಳಲ್ಲಿ ಸುಮಾರು 1.9 ಬಿಲಿಯನ್ ಅಂದರೆ 190 ಕೋಟಿ ವೀಕ್ಷಣೆಯಾಗಿದ್ದು, ಇದು ಇನ್ಸ್ಟಾಗ್ರಾಮ್ನಲ್ಲಿ ದಾಖಲೆಯಾಗಿದೆ. ಇಲ್ಲಿಯವರೆಗೂ ಇಷ್ಟು ದೊಡ್ಡ ಮಟ್ಟಿಗೆ ಯಾವ ವಿಡಿಯೋ ಕೂಡ ವೀಕ್ಷಣೆ ಆಗಿಲ್ಲ.
ಇದೊಂದು ಮಾರ್ಕೆಟಿಂಗ್ ವಿಡಿಯೋ ಆಗಿದ್ದರೂ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅದ್ಭುತ ವ್ಯಾಪ್ತಿಯನ್ನು ಪಡೆದಿದೆ. ಇನ್ನು ಈ ಬಗ್ಗೆ ಹಲವಾರು ನೆಟ್ಟಿಗರು ಪ್ರತಿಕ್ರಿಯಿದ್ದು, "ಒಂದು ತಿಂಗಳಲ್ಲಿ 2 ಬಿಲಿಯನ್ ವೀಕ್ಷಣೆಗಳನ್ನು ಸಾಧಿಸುವುದು ಇನ್‌ಸ್ಟಾಗ್ರಾಮ್ ಇತಿಹಾಸ" ಎಂದಿದ್ದಾರೆ.
ಇದನ್ನೂ ಓದಿ: ಚಾರಿತ್ರ ನಿರ್ಮಾಣ ಶಿಕ್ಷಣದ ಉದ್ದೇಶ
ತಾಯ್ತನಕ್ಕಾಗಿ ಬ್ರೇಕ್ ತೆಗೆದುಕೊಂಡಿದ್ದ ನಟಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದು, ಶಾರುಕ್ ಜೊತೆ ಕಿಂಗ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ದಕ್ಷಿಣದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಜೊತೆ ನಟಿಸಲಿದ್ದಾರೆ. (ಏಜೆನ್ಸೀಸ್)