ನ್ಯೂಸ್

‘ಜವಾನ್’ ಚಿತ್ರದಲ್ಲಿ ನಟಿಸಲು ಒಂದು ರೂಪಾಯಿಯೂ ಪಡೆದಿಲ್ಲ, 15 ಕೋಟಿ ಚಾರ್ಜ್​​​ ಮಾಡಿದ್ದಾರೆ ಅನ್ನೋದನ್ನ ಅಲ್ಲಗಳೆದ ದೀಪಿಕಾ

‘ಜವಾನ್’ ಸಿನಿಮಾ ಮೂಲಕ ಶಾರುಖ್ ಖಾನ್ ಅವರು ಒಂದೇ ವರ್ಷದಲ್ಲಿ ಎರಡನೇ ಯಶಸ್ಸು ಕಂಡಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಮಾತ್ರವಲ್ಲದೆ, ನಯನತಾರಾ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ ನಟಿಸಿದ್ದಾರೆ.


ಅಚ್ಚರಿಯ ವಿಚಾರ ಎಂದರೆ ದೀಪಿಕಾ ಪಡುಕೋಣೆ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಕ್ಕೆ ಯಾವುದೇ ಸಂಭಾವನೆ ಪಡೆದಿಲ್ಲ.
‘ಜವಾನ್’ ಸಿನಿಮಾದಲ್ಲಿ ನಟಿಸಲು ದೀಪಿಕಾ ಪಡುಕೋಣೆ, 15 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಆದರೆ, ಇದನ್ನು ದೀಪಿಕಾ ಅಲ್ಲಗಳೆದಿದ್ದಾರೆ. ತಾವು ಈ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲ ಎಂದಿರುವ ಅವರು, ಕಾರಣವನ್ನೂ ತಿಳಿಸಿದ್ದಾರೆ.


ಭಾರತ ವಿಶ್ವಕಪ್ ಗೆದ್ದ ಕಥೆಯನ್ನು ಆಧರಿಸಿ ‘83’ ಚಿತ್ರವನ್ನು ಮಾಡಲಾಗಿತ್ತು. ಇದರಲ್ಲೂ ದೀಪಿಕಾ ಅತಿಥಿ ಪಾತ್ರ ಮಾಡಿದ್ದರು. ಆದರೆ, ಅದಕ್ಕೆ ಅವರು ಸಂಭಾವನೆ ಪಡೆದಿಲ್ಲ. ಇದಕ್ಕೆ ಅವರು ಕಾರಣ ತಿಳಿಸಿದ್ದಾರೆ. ‘ನನಗೆ 83 ಸಿನಿಮಾದ ಭಾಗವಾಗಬೇಕಿತ್ತು. ಪತಿಯ ಯಶಸ್ಸಿನ ಭಾಗವಾಗುವ ಹೆಂಡತಿಯ ಪಾತ್ರದಲ್ಲಿ ನಟಿಸೋಕೆ ನನಗೆ ಖುಷಿ ಇತ್ತು. ಪತಿಗಾಗಿ ತಮ್ಮ ವೃತ್ತಿ ಜೀವನವನ್ನು ತ್ಯಾಗ ಮಾಡುವ ಮಹಿಳೆಯರಿಗೆ ಗೌರವ ಸಲ್ಲಿಸಲು ನನಗೊಂದು ಅವಕಾಶ ಸಿಕ್ಕಿತ್ತು. ಅದಕ್ಕೆ ಯಾವುದೇ ಚಾರ್ಜ್ ಮಾಡಿರಲಿಲ್ಲ.


ಅದೇ ರೀತಿ ಶಾರುಖ್ ಖಾನ್​ ಹಾಗೂ ರೋಹಿತ್ ಶೆಟ್ಟಿಗಾಗಿ ನಾನು ಸಂಭಾವನೆ ಪಡೆಯದೇ ಅತಿಥಿ ಪಾತ್ರ ಮಾಡುತ್ತೇನೆ’ ಎಂದು ದೀಪಿಕಾ ಹೇಳಿದ್ದಾರೆ.