ನ್ಯೂಸ್

ಮದುವೆಯಾಗಿ 5 ವರ್ಷಗಳ ನಂತರ ವಿವಾಹದ ವಿಡಿಯೋ ಹಂಚಿಕೊಂಡ ದೀಪಿಕಾ-ರಣವೀರ್; ಇಲ್ಲಿದೆ ನೋಡಿ ಆ ಹೃದಯಸ್ಪರ್ಶಿ ದೃಶ್ಯಗಳು

ಮುಂಬೈ: ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಐದು ವರ್ಷಗಳ ನಂತರ ಇದೀಗ ದೀಪಿಕಾ ಮತ್ತು ರಣವೀರ್ ತಮ್ಮ ಮದುವೆಯ ವಿಡಿಯೋವನ್ನು ರಿವೀಲ್ ಮಾಡಿದ್ದಾರೆ.

ಕರಣ್ ಜೋಹರ್ ತಮ್ಮ ಸೆಲೆಬ್ರಿಟಿ ಚಾಟ್ ಶೋ 8 ನೇ ಸೀಸನ್‌ನೊಂದಿಗೆ ಮತ್ತೆ ಮರಳಿದ್ದು, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಕಾಫಿ ವಿಥ್ ಕರಣ್ ಶೋನಲ್ಲಿ ಭಾಗವಹಿಸಿದ್ದಾರೆ. ಹೊಸ ಸೀಸನ್​​​ನಲ್ಲಿ ಅವರ ಮೊದಲ ಅತಿಥಿಗಳು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ.

ಮದುವೆಯ ಆಚರಣೆಗಳು

ಕಾಫಿ ವಿತ್ ಕರಣ್ ಸೀಸನ್ 8 ರಲ್ಲಿ ರಣವೀರ್ ಮತ್ತು ದೀಪಿಕಾ, ಅಭಿಮಾನಿಗಳು ಮತ್ತು ಕರಣ್​​​​​​ಗೆ ತಮ್ಮ ಮದುವೆಯ ಸೆಲೆಬ್ರೇಷನ್ ವಿಡಿಯೋ ತೋರಿಸಿದರು. ವಿಡಿಯೋದಲ್ಲಿ ನಿಶ್ಚಿತಾರ್ಥ, ಮೆಹೆಂದಿ, ಆನಂದ್​​​ ಕರಜ್ ಮತ್ತು ಮಂಟಪ ಸೇರಿದಂತೆ ಹಲವು ಆಚರಣೆಗಳನ್ನು ನೋಡಬಹುದು.

ದೀಪಿಕಾಗೆ ಪ್ರಪೋಸ್ ಮಾಡಿದ ರಣವೀರ್

ರಣವೀರ್ ಸಿಂಗ್‌ನಿಂದ ವಿಡಿಯೋ ಪ್ರಾರಂಭವಾಗುತ್ತದೆ. ಮಾಲ್ಡೀವ್ಸ್‌ನಲ್ಲಿ ದೀಪಿಕಾ ಪಡುಕೋಣೆಗೆ ಪ್ರಪೋಸ್ ಮಾಡಿದ್ದನ್ನು ರಣವೀರ್ ಸಿಂಗ್ ಹೇಳಿದ್ದಾರೆ. ಇದಾದ ನಂತರ ಇಬ್ಬರೂ ಕುಟುಂಬವನ್ನು ಭೇಟಿ ಮಾಡಿ ತಮ್ಮ ಎಂಗೇಜ್ ಬಗ್ಗೆ ಹೇಳಲು ಬೆಂಗಳೂರಿಗೆ ತೆರಳಿದರು. ಮಗಳ ಆಯ್ಕೆಯಿಂದ ದೀಪಿಕಾ ತಾಯಿಗೆ ಅಷ್ಟಾಗಿ ಸಂತೋಷವಾಗದಿದ್ದರೂ, ನಂತರ ರಣವೀರ್ ಅವರನ್ನು ಮೆಚ್ಚಿಸಿದ್ದರು. ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ತಂದೆ ಹಾಗೂ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಕೂಡ ತಮ್ಮ ಅಳಿಯನನ್ನು ಹೊಗಳಿರುವುದು ಕಂಡುಬಂದಿದೆ. ಪ್ರಕಾಶ್ ಪಡುಕೋಣೆ, ಅಳಿಯ ತಮ್ಮ ಕುಟುಂಬಕ್ಕೆ ಜೀವ ತುಂಬಿದರು. ರಣವೀರ್ ಉತ್ಸಾಹಭರಿತ ವ್ಯಕ್ತಿ. ತನ್ನ ಕುಟುಂಬಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾನೆ ಎಂದು ಪ್ರಶಂಸಿಸಿದ್ದಾರೆ.

ಭಾವುಕರಾದ ದೀಪಿಕಾ

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ಅನೇಕ ಗಮನ ಸೆಳೆಯುವ ಕ್ಷಣಗಳೂ ಇಲ್ಲಿವೆ. ವಿಶೇಷವಾಗಿ ಮೆಹಂದಿ ಸಮಾರಂಭದಲ್ಲಿ ಆ ಸುಂದರವಾದ ಕ್ಷಣ ಕಂಡುಬಂದಿದೆ. ಸಮಾರಂಭದಲ್ಲಿ ರಣವೀರ್ ಡ್ಯಾನ್ಸ್ ಮಾಡಿದ್ದಾರೆ. ಇದೇ ವೇಳೆ ಭಾವುಕಳಾದ ದೀಪಿಕಾ ಕೂಡ ಮೆಹಂದಿ ಕಾರ್ಯಕ್ರಮದಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.