ನ್ಯೂಸ್

'ಸ್ಪಿರಿಟ್​'ಗೆ ಗುಡ್​ಬೈ! ಅಲ್ಲು ಅರ್ಜುನ್​ ಚಿತ್ರಕ್ಕೆ ಹಾಯ್​; ನಟಿಯ 40 ಕೋಟಿ ರೂ. ಸಂಭಾವನೆಗೆ ಒಪ್ಪಿಕೊಂಡ್ರಾ ಅಟ್ಲಿ? | Deepika Padukone

Deepika Padukone: ಇತ್ತೀಚೆಗಷ್ಟೇ ತೆಲುಗು ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸ್ಪಿರಿಟ್’​ ಚಿತ್ರದಿಂದ ಹೊರನಡೆದ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ, ಇದೀಗ ಪ್ರಭಾಸ್​ ಅಭಿನಯದ ಮತ್ತೊಂದು ಸಿನಿಮಾ ಕಲ್ಕಿ-2 ಚಿತ್ರದಿಂದಲೂ ಹೊರಹೋಗಲಿದ್ದಾರೆ ಎಂಬ ಸುದ್ದಿಗಳು ಜಾಲತಾಣಗಳಲ್ಲಿ ಹರಿದಾಡಿವೆ. ಹಲವು ಷರತ್ತುಗಳು ಮತ್ತು ದುಬಾರಿ ಮೊತ್ತದ ಸಂಭಾವನೆ ಕಾರಣ ದೀಪಿಕಾರನ್ನು ತಮ್ಮ ಚಿತ್ರದಲ್ಲಿ ಮುಂದುವರಿಸಲು ಸಂದೀಪ್ ಇಚ್ಛಿಸಲಿಲ್ಲ. ಹೀಗಾಗಿ ಸ್ಪಿರಿಟ್​ನಿಂದ ತೆಗೆದುಹಾಕಲಾಯಿತು. ಈ ವಿವಾದಗಳ ನಡುವೆಯೇ ಇದೀಗ ಅಟ್ಲಿ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ದೀಪಿಕಾ ಎಂಟ್ರಿ ಕೊಟ್ಟಿದ್ದಾರೆ.

ದುಬಾರಿ ಮೊತ್ತದ ಸಂಭಾವನೆ ಮತ್ತು ಚಿತ್ರದ ಲಾಭದ ಪಾಲು ಕೇಳಿದ ಹಿನ್ನೆಲೆ ದೀಪಿಕಾರನ್ನು ಚಿತ್ರದಿಂದ ತೆಗೆದುಹಾಕಲು ನಿರ್ದೇಶಕ ಸಂದೀಪ್ ಕಠಿಣ ನಿರ್ಧಾರ ಕೈಗೊಂಡರು. ಇದೊಂದು ಸಿನಿಮಾದಲ್ಲಿ ನಟಿಸಲು ಹಲವಾರು ಷರತ್ತುಗಳನ್ನು ವಿಧಿಸಿದ್ದ ದೀಪಿಕಾ ಪಡುಕೋಣೆ, ನಿರ್ದೇಶಕ ಅಟ್ಲಿಗೆ ಯಾವ ಬೇಡಿಕೆಯನ್ನು ಮುಂದಿಡದೆ, ದುಬಾರಿ ಮೊತ್ತದ ಸಂಭಾವನೆ ಕೇಳದೆ ಒಪ್ಪಿಕೊಂಡ್ರಾ ಎಂಬ ಪ್ರಶ್ನೆಗಳು ಸದ್ಯ ಸಿನಿ ವಲಯದಲ್ಲಿ ಕೇಳಿಬಂದಿವೆ. ಕೆಲವರು ನಿರ್ದೇಶಕ ವಂಗಾರನ್ನು ಜಾಲತಾಣಗಳಲ್ಲಿ ಟೀಕಿಸಿದ್ದಾರೆ.

ತೆಲುಗು ನಟ ಅಲ್ಲು ಅರ್ಜುನ್ ಮತ್ತು ಅಟ್ಲಿ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಸೈನ್ಸ್​-ಫಿಕ್ಷನ್​ ಆಧರಿತ ಬಹುನಿರೀಕ್ಷಿತ "AA22xA6" ಚಿತ್ರಕ್ಕೆ ನಟಿ ದೀಪಿಕಾ ಪಡುಕೋಣೆ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದಾರೆ. ಈ ಕುರಿತು ಚಿತ್ರತಂಡ ಕೂಡ ತಮ್ಮ ಜಾಲತಾಣದ ಖಾತೆಯಲ್ಲಿ ಮಾಹಿತಿ ದೃಢಪಡಿಸಿದೆ. ಈ ಹಿಂದೆ ಅಟ್ಲಿ ಜೊತೆಗೆ 'ಜವಾನ್'​ನಲ್ಲಿ ಕೆಲಸ ಮಾಡಿದ್ದ ದೀಪಿಕಾಗೆ ಇದು ಅವರೊಟ್ಟಿಗೆ ಎರಡನೇ ಸಿನಿಮಾ. ಅದೇ ಅಲ್ಲು ಅರ್ಜುನ್​ ಅವರೊಂದಿಗೆ ಮೊದಲ ಚಿತ್ರ ಎಂಬುದು ಗಮನಾರ್ಹ,(ಏಜೆನ್ಸೀಸ್).