ನ್ಯೂಸ್

ದೀಪಿಕಾ ದಾಸ್ ಮನೆಯ ಬೆಕ್ಕು ನಾಪತ್ತೆ;ಹುಡುಕಿಕೊಟ್ಟವರಿಗೆ 15 ಸಾವಿರ ರೂ. ಬಹುಮಾನ!

ಬೆಂಗಳೂರು: ನಟಿ ದೀಪಿಕಾ ದಾಸ್ ಅವರಿಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ, ಇದೀಗ ಅವರ​ ಮನೆಯ ಕಪ್ಪು ಬೆಕ್ಕು ಶ್ಯಾಡೋ ಕಾಣಿಯಾಗಿದೆ. ಈ ಕುರಿತು ದೀಪಿಕಾ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ನಟಿ ದೀಪಿಕಾ ದಾಸ್ ಮನೆಯಲ್ಲಿ ಪ್ರಾಣಿಗಳು ಕೂಡ ಕುಟುಂಬದ ಸದಸ್ಯರಾಗಿದ್ದಾರೆ. ಮನೆಯವರಿಗೆ ಕೊಡುವಷ್ಟೇ ಪ್ರೀತಿಯನ್ನು ಬೆಕ್ಕು ಮತ್ತು ಶ್ವಾನಕ್ಕೆ ಕೊಡುತ್ತಿದ್ದಾರೆ. ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದ ಶ್ಯಾಡೋ ಕಾಣೆಯಾಗಿದೆ. 

ದೀಪಿಕಾ ಅವರ ಮನೆಯ ಕಪ್ಪು ಬೆಕ್ಕು ಶ್ಯಾಡೋ ಶನಿವಾರ (ಫೆ.18) ರಂದು ರಾತ್ರಿಯಿಂದ ವಿಶ್ವೇಶ್ವರಯ್ಯ ಲೇಔಟ್, 3ನೇ ಬ್ಲಾಕ್, ಉಲ್ಲಾಳು, ಬೆಂಗಳೂರಿನಲ್ಲಿ ಕಾಣೆಯಾಗಿದೆ. ಹುಡುಕಿ ಕೊಟ್ಟವರಿಗೆ 10,000 ಯಿಂದ 15,000 ಸಾವಿರ ರೂ. ಬಹುಮಾನ ಕೊಡಲಾಗುವುದು ಎಂದು ನಟಿ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.