ಕಾರವಾರ: ಇಲ್ಲಿನ ಮಾಜಾಳಿಯ ರಾಮನಾಥ ದೇವಸ್ಥಾನಕ್ಕೆ ನೂತನ ನಂದಿ ರಥ ಸಮರ್ಪಣೆ ಕಾರ್ಯಕ್ರಮ ಸೋಮವಾರ ಸಾಂಗವಾಗಿ ನೆರವೇರಿತು.
ಶಿವಾನಂದ ದತ್ತಾತ್ರೆಯ ಪವಾರ್ ಅವರ ಅವರ ಸ್ಮರಣಾರ್ಥ ಪ್ರಕಾಶ ದತ್ತಾತ್ರೆಯ ಪವಾರ್ ಹಾಗೂ ಲತಾ ಪವಾರ್ ದಂಪತಿ ರಥವನ್ನು ದೇಣಿಕೆಯಾಗಿ ನೀಡಿದ್ದು, ಸೋಮವಾರ ಅಯೋಧ್ಯೆ ರಾಮ ಮಂದಿರದಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯ ವೇಳೆಯಲ್ಲಿಯೇ ಇಲ್ಲಿಯೂ ರಾಮನಾಥೇಶ್ವರ ರಥ ಸಮರ್ಪಣೆ ನಡೆಯಿತು.
ಸೋಂದಾದ ವೇದ ವಿದ್ವಾನ್ ಬಾಲಚಂದ್ರ ಶಾಸ್ತ್ರಿ ಅವರ ನೇತೃತ್ವದಲ್ಲಿ ಭಾನುವಾರದಿಂದಲೇ ಧಾರ್ಮಿಕ ವಿಧಿಗಳು ಜರುಗಿದವು. ದೇವಸ್ಥಾನ ಆಡಳಿತ ಸಮಿತಿಯ ಮಕ್ತೇಸರ ರವೀಂದ್ರ ಪವಾರ್ ಅವರಿಗೆ ರಥವನ್ನು ದಂಪತಿ ವಿಽವತ್ತಾಗಿ ಹಸ್ತಾಂತರಿಸಿದರು. ನಂತರ ರಾತ್ರಿ ರಥೋತ್ಸವ ನಡೆಯಿತು. ಇಡೀ ದಿನ ಭಜನ ನಡೆಯಿತು. ಮಧ್ಯಾಹ್ನ ಅನ್ನ ಸಂರ್ಪಣೆ ನಡೆದಿದ್ದು, 1 ರಿಂದ 5 ಗಂಟೆಯರವೆಗೆ 6 ಸಾವಿರಕ್ಕೂ ಅಽಕ ಜನರು ಪ್ರಸಾದ ಭೋಜನ ಸ್ವೀಕರಿಸಿದರು.