ನವದೆಹಲಿ: ದೇಶದಲ್ಲಿ ಮಹಿಳೆಯರ ಲವಂತಿಕೆ ಇಳಿಮುಖವಾಗಿದೆ. ಇದು ಎಲ್ಲ ಸಮುದಾಯದ ಸ್ತ್ರೀಯರಲ್ಲೂ ಕಂಡುಬಂದಿದೆ ಎಂದು 5ನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್-5) ಹೇಳಿದೆ.
2015&16ರಲ್ಲಿ ನಡೆದ ಎನ್ಎಫ್ಎಚ್ಎಸ್-4ರಲ್ಲಿ ಲವಂತಿಕೆಯ ಪ್ರಮಾಣವು ಶೇ. 2.2 ಇತ್ತು. 2019&21ರಲ್ಲಿ ಈ ಪ್ರಮಾಣ ಶೇ. 2ಕ್ಕೆ ತಗ್ಗಿದೆ. ಪ್ರತಿ ಮಹಿಳೆಯ ಸರಾಸರಿ ಸಂತಾನೋತ್ಪತ್ತಿ ದರದಲ್ಲಿ (ಟಿಎ್ಆರ್) ಮುಂಚೂಣಿಯಲ್ಲಿದ್ದ ಮುಸ್ಲಿಮರಲ್ಲೂ ಲವಂತಿಕೆ ಪ್ರಮಾಣ ಶೇ. 2.62 ರಿಂದ ಶೇ. 2.36ಕ್ಕೆ ಕುಗ್ಗಿದೆ. ಆದರೂ ಇತರ ಸಮುದಾಯಗಳ ಸ್ತ್ರೀಯರ ಲವಂತಿಕೆಗೆ ಹೋಲಿಸಿದರೆ ಮುಸ್ಲಿಂ ಮಹಿಳೆಯರಲ್ಲಿ ಟಿಎಫ್ಆರ್ ಹೆಚ್ಚಿದೆ. ಎನ್ಎಫ್ಎಚ್ಎಸ್-5ರಲ್ಲಿ ಸಿಖ್ಖರು, ಜೈನರಲ್ಲಿ ಲವಂತಿಕೆ ಹೆಚ್ಚಿದೆ.
ಸಿಖ್ಖರಲ್ಲಿ ಎನ್ಎಫ್ಎಚ್ಎಸ್-4ರಲ್ಲಿ ಶೇ. 1.58 ಇದ್ದಿದ್ದು, ಈಗ ಶೇ. 1.61ಕ್ಕೆ ಹಿಗ್ಗಿದೆ. ಜೈನರಲ್ಲಿ ಎನ್ಎಫ್ಎಚ್ಎಸ್-4ರಲ್ಲಿ ಶೇ. 1.2 ಇದ್ದಿದ್ದು, ಈಗ ಶೇ. 1.6ಕ್ಕೆ ವೃದ್ಧಿ ಕಂಡಿದೆ. ಎನ್ಎಫ್ಎಸ್ಎಸ್ ಮೊದಲ (1992-93) ಸರ್ವೇಯಲ್ಲಿ ಮುಸ್ಲಿಮರ ಲವಂತಿಕೆ ದರ ಶೇ. 4.1 ಇತ್ತು. ಆಗ ಹಿಂದುಗಳಲ್ಲಿ ಈ ಪ್ರಮಾಣ ಶೇ. 3.3 ಇತ್ತು. ಕೆಸ್ತರು ಮತ್ತು ಸಿಖ್ಖರು 3ನೇ ಸ್ಥಾನದಲ್ಲಿ ಇದ್ದರು.
ಗರ್ಭನಿರೋಧಕ ಬಳಕೆ ಹೆಚ್ಚಳ
ಗರ್ಭನಿರೋಧಕ ಬಳಕೆ ಶೇ. 67ಕ್ಕೆ ಅಧಿಕವಾಗಿದೆ. ಗರ್ಭನಿರೋಧಕ ಸಾಧನಗಳ ಬಳಕೆ ಶೇ. 48ರಿಂದ ಶೇ. 56ಕ್ಕೆ ಹೆಚ್ಚಿದೆ. ಸಂತಾನಶಕ್ತಿಹರಣ (ಶೇ.38), ಕಾಂಡಮ್ (ಶೇ.9.5%) ಬಳಕೆ ಕಂಡುಬಂದಿದೆ.