ನ್ಯೂಸ್

ಬರ; ಕೇಂದ್ರಕ್ಕೆ ನೆರವು ಯಾಚಿಸಲು ನಿರ್ಧಾರ, ಶೀಘ್ರ‌ ಮನವಿ ಸಲ್ಲಿಕೆ

ಬೆಂಗಳೂರು: ರಾಜ್ಯದ 195 ತಾಲೂಕಲ್ಲಿ ಬರ‌ ಆವರಿಸಿದ್ದು, ನೆರವು ಕೋರಿ ಕೇಂದ್ರಕ್ಕೆ ಶೀಘ್ರ ಮನವಿ ಸಲ್ಲಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 195 ತಾಲೂಕು ಬರ ಪೀಡಿತ ಎಂದು ಸಂಪುಟ ಉಪ‌ಸಮಿತಿ ಶಿಫಾರಸು ಮಾಡಿದೆ. ಕೂಡಲೇ ವರದಿ ಸಿದ್ಧಪಡಿಸಿ ನೆರವು ನೀಡುವಂತೆ ಕೇಂದಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಇದೇ ವೇಳೆ ತಿಳಿಸಿದರು.

ಬುಧವಾರ ಸಂಪುಟ ಉಪ ಸಮಿತಿ ಸಭೆಯ ಬಳಿಕ‌ಮಾಹಿತಿ ನೀಡಿದ್ದ ಕಂದಾಯ ಸಚಿವ ಕೃಷ್ಣಬೈರೇಗೌಡ, ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಮತ್ತು ಬೆಳೆ ಪರಿಶೀಲನೆ (ಗ್ರೌಂಡ್ ಟ್ರುತಿಂಗ್) ನಡೆಸಲಾಗಿದ್ದು, ಕೇಂದ್ರದ ಮಾರ್ಗಸೂಚಿಯಂತೆ 161 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿದೆ. ಇದಲ್ಲದೆ, 34 ತಾಲೂಕುಗಳಲ್ಲೂ ಸ್ಥಿತಿ ಚಿಂತಾಜನಕವಾಗಿದ್ದು ಕೇಂದ್ರ ಮಾರ್ಗಸೂಚಿ ಅನ್ವಯಿಸದಿದ್ದರೂ ಈ ತಾಲೂಕುಗಳನ್ನೂ ಸಹ ಪಟ್ಟಿಗೆ ಸೇರಿಸಲಾಗಿದೆ ಎಂದರು.