ಬೆಂಗಳೂರು: ಕರೋನ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅರ್ಚಕರಿಗೆ ಮೂರು ತಿಂಗಳು ಮುಂಗಡ ತಸ್ತೀಕ್ ಹಣ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ರಾಜ್ಯದ ಒಟ್ಟು 26700 ದೇವಸ್ಥಾನಗಳ ಅರ್ಚಕರಿಗೆ ತಸ್ತಿಕ್ ಹಣ ನೀಡುವುದಕ್ಕಾಗಿ 33.66 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಇದನ್ನೂ ಓದಿ ಊರಿಗೆ ಹೋಗೋರು ಈಗ್ಲೇ ಪ್ಲಾನ್ ಮಾಡ್ಕೊಳಿ, ಶನಿವಾರವೇ ಹೊರಡುತ್ತೆ ಲಾಸ್ಟ್ ಬಸ್, ಭಾನುವಾರ ಸಂಪೂರ್ಣ ಬಂದ್
ದೇಗುಲಗಳನ್ನು ಪ್ರಾರಂಭಿಸುವಂತೆ ಅರ್ಚಕರು ಮನವಿ ಮಾಡಿದ್ದಾರೆ. ಅವರು ತಮ್ಮ ಜೀವನೋಪಾಯಕ್ಕೆ ತಟ್ಟೆಯ ಕಾಸನ್ನೇ ನಂಬಿಕೊಂಡಿದ್ದಾರೆ. ಲಾಕ್‌ಡೌನ್‌ನಿಂದ ಅವರಿಗೆ ಸಮಸ್ಯೆಯಾಗಿದೆ ಎಂದು ವಿವರಿಸಿದರು.
ಅವರಿಗೆ ಆಹಾರದ ಕಿಟ್‌ಗಳ ವಿತರಣೆಯನ್ನೂ ಸರ್ಕಾರ ಮಾಡುತ್ತಿದೆ. ಆದರೂ ದೇಗುಲಗಳು ಪ್ರಾರಂಭವಾದರೆ ಅವರ ಸಮಸ್ಯೆಗಳು ಬಗೆಹರಿಯುತ್ತವೆ. ಹೀಗಾಗಿ ಅವರು ದೇಗುಲ ಪ್ರಾರಂಭಕ್ಕೆ ಒತ್ತಾಯಿಸಿದ್ದಾರೆ. ಆದರೆ ಸದ್ಯಕ್ಕೆ ನಾವು ಅವಕಾಶ ಕೊಡೋಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.