ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನು ಭವಿಷ್ಯ ನಾಳೆಯೇ (ಡಿ.13) ನಿರ್ಧಾರವಾಗಲಿದೆ.
ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆಯ ತೀರ್ಪು ನಾಳೆ ಪ್ರಕಟವಾಗಲಿದ್ದು, ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ವಿಶ್ವಜಿತ್ ಶೆಟ್ಟಿಯವರ ಪೀಠವು ಮಧ್ಯಾಹ್ನ 2:30ಕ್ಕೆ ತೀರ್ಪು ನೀಡಲಿದೆ.