ನ್ಯೂಸ್

ಪುನೀತ್ ಕೆರೆಹಳ್ಳಿ, ಗೋಪಿಗೌಡಗೆ ಕೊಲೆ ಬೆದರಿಕೆ

ಅರಸೀಕೆರೆ: ರಾಷ್ಟ್ರ ರಕ್ಷಣಾ ಪಡೆ ಮುಖಂಡ ಹಾಗೂ ಗೋ ರಕ್ಷಕ ಪುನೀತ್ ಕೆರೆಹಳ್ಳಿ, ಗೋಪಿಗೌಡಗೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸಿರಾಜ್ ಅಲಿ ಬೇಗ್ ಕೊಲೆ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ.

ನಗರದ ಮಟನ್ ಮಾರ್ಕೆಟ್ ನಿವಾಸಿಯಾಗಿದ್ದು ನನಗೆ ನೀವೆಲ್ಲ ಏನು ಹೇಳಿದ್ರಿ, ಸರ್ಕಾರ ಕ್ರಮ ಕೈಗೊಳ್ಳತ್ತೆ ಸುಮ್ಮನಿರಿ ಅಂದ್ರಿ. ನನಗೆ ಅಲ್ಲಿಯವರೆಗೂ ಕಾಯಲು ಆಗಲ್ಲ. ನೀವು ಹೋಗಿ ಅವರಿಬ್ಬರನ್ನು ಮರ್ಡರ್ ಮಾಡಿ. ನಾನು ನಿಮ್ಮನ್ನು ಬಿಡಿಸಿಕೊಂಡು ಬರ್ತೀನಿ’ ಎಂದಿರುವ ಸಿರಾಜ್ ಅಲಿ ಬೇಗ್ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪುನೀತ್ ಕೆರೆಹಳ್ಳಿ ಹಾಗೂ ಗೋಪಿಗೌಡ ಮರ್ಡರ್ ಮಾಡಲು ಹೋಗುತ್ತಿದ್ದೇನೆ ಎಂದಿದ್ದು ಆತನ ವಿರುದ್ಧ ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಿಂದುಪರ ಸಂಘಟನೆ ಮುಖಂಡರಿಗೆ ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ತೀವ್ರ ನಿಗಾ ಇರಿಸಿದ್ದಾರೆ.