ನ್ಯೂಸ್

ಕರೊನಾಗೆ ಪತ್ನಿ ಬಲಿ, ಐಸೋಲೇಶನ್​ನಲ್ಲಿ ಪತಿ

ಕಾರವಾರ: ಎರಡು ದಿನದ ಹಿಂದೆ ಸದಾಶಿವಗಡ ಮೂಲದ ವ್ಯಕ್ತಿಯೊಬ್ಬರು ಕುವೈತ್​ನಲ್ಲಿ ಕರೊನಾಗೆ ಬಲಿಯಾದ ಬೆನ್ನಲ್ಲೇ, ಇಲ್ಲಿನ ಮತ್ತೊಬ್ಬರು ಮುಂಬೈನಲ್ಲಿ ಸೋಂಕು ತಗುಲಿ ಅಸುನೀಗಿದ್ದಾರೆ.

ಸದಾಶಿವಗಡದ ಮಹಿಳೆ ಮೊಬೆಲ್ ಫರ್ನಾಂಡಿಸ್ (60) ಮೃತರು. ಇವರ ಪತಿ ವಿಕಿ ಫರ್ನಾಂಡಿಸ್ ಅವರಿಗೂ ಕರೊನಾ ಸೋಂಕಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಐಸೋಲೇಶನ್​ನಲ್ಲಿ ಇದ್ದಾರೆ.

ಸದಾಶಿವಗಡ ಮಹಾಮಾಯಾ ದೇವಸ್ಥಾನ ನಿವಾಸಿ ಮೊಬೆಲ್​ ಮತ್ತು ವಿಕಿ ದಂಪತಿ ಅವರ ಪುತ್ರ ಏರ್​ಲೈನ್ಸ್​ನ ಉದ್ಯೋಗಿ. ಮುಂಬೈನಲ್ಲಿದ್ದ ಮಗನ ಮನೆಗೆಂದು ಲಾಕ್​ಡೌನ್​ಗೂ ಮುನ್ನವೇ ದಂಪತಿಗಳು ಹೋಗಿದ್ದರು. ಮೃತರಿಗೆ ಪುತ್ರಿ, ಇಬ್ಬರು ಪುತ್ರರು ಇದ್ದಾರೆ‌.