ಜೇನುಕಲ್ಲು ಬೆಟ್ಟದಲ್ಲಿ ಮೃತದೇಹ ಪರಿಶೀಲನೆ ಮಾಡುತ್ತಿರುವ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ. 
ನ್ಯೂಸ್

ಬೆಟ್ಟದಿಂದ ಕಾಲು ಜಾರಿ ಬಿದ್ದು ಸಾವು

ಶನಿವಾರಸಂತೆ: ಸೋಮವಾರಪಟೆ ತಾಲೂಕು ಶನಿವಾರಸಂತೆ ಮಾಲಂಬಿ ಜೇನು ಕಲ್ಲು ಬೆಟ್ಟದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಮಾಲಂಬಿ ಗ್ರಾಮದ ಅಯ್ಯಪ್ಪ (53) ಮೃತರು. ಆ.15 ರಂದು ಜೇನುಕಲ್ಲು ಬೆಟ್ಟಕ್ಕೆ ಕಣಿಲೆ ತರಲೆಂದು ತೆರಳಿದ್ದ ಸಂದರ್ಭದಲ್ಲಿ ಬೆಟ್ಟದ ಮೇಲಿಂದ ಕಾಲು ಜಾರಿ ಬಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ನಂತರ ಮನೆಯವರು ಗ್ರಾಮಸ್ಥರು ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು. ಮಂಗಳವಾರ ಸ್ಥಳೀಯರು ಕಾಡಿನತ್ತ ತೆರಳಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.