ನ್ಯೂಸ್

ಡಿಸಿಎಂ ಪುತ್ರನ ಆರೋಗ್ಯ ಗಂಭೀರ; ಚೆನ್ನೈಗೆ ಏರ್​ಲಿಫ್ಟ್​ ಮಾಡುವ ಸಾಧ್ಯತೆ

lakshmihegde

ಬೆಂಗಳೂರು: ಡಿಸಿಎಂ ಗೋವಿಂದ ಕಾರಜೋಳ ಅವರ ಪುತ್ರ ಗೋಪಾಲ ಕಾರಜೋಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಕರೊನಾ ಸೋಂಕಿನಿಂದ 24 ದಿನಗಳಿಂದಲೂ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋಪಾಲ ಕಾರಜೋಳ ಅವರನ್ನು ಇದೀಗ ಚೆನ್ನೈಗೆ ಏರ್​ಲಿಫ್ಟ್​ ಮಾಡುವ ಬಗ್ಗೆ ಚಿಂತಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮಣಿಪಾಲ್​​ನಲ್ಲಿ ವೆಂಟಿಲೇಟರ್ ಮುಖಾಂತರ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಅವರ ಆರೋಗ್ಯ ಸುಧಾರಿಸಿರಲಿಲ್ಲ. ಹಾಗಾಗಿ ಚೆನ್ನೈ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ಡಿಸಿಎಂ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇನ್ನು ಡಿಸಿಎಂ ಪುತ್ರನ ಆರೋಗ್ಯ ಗಂಭೀರವಾಗಿದೆ ಎಂದು ಇಂದು ಸಿಎಂ ಯಡಿಯೂರಪ್ಪನವರೂ ಹೇಳಿದ್ದರು.