ಶ್ರೀನಿವಾಸಪುರ ತಾಲೂಕಿನ ಮಣಿಗಾನಹಳ್ಳಿ ವ್ಯವಸಾಯ ಸಹಕಾರ ಸಂದ ಆವರಣದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗೆ ಶಾಸಕ ಕೆ.ಆರ್.ರಮೇಶ್‌ಕುವಾರ್ ಸಾಲ ವಿತರಣೆ ಮಾಡಿದರು. ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ವ್ಯವಸಾಯ ಸಹಕಾರ ಸಂದ ಅಧ್ಯಕ್ಷ ಬಿ.ವಿ.ಸುರೇಶ್‌ರೆಡ್ಡಿ, ಉಪಾಧ್ಯಕ್ಷೆ ವೇದಾವತಿ ಇದ್ದರು. 
ನ್ಯೂಸ್

ಡಿಸಿಸಿ ಬ್ಯಾಂಕಿಗೆ ಮರುಜೀವ ಕೊಟ್ಟಿದ್ದು ನಾನೇ; ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಆರ್.ರಮೇಶ್‌ಕುವಾರ್ ಹೇಳಿಕೆ

 ಶ್ರೀನಿವಾಸಪುರ: ಡಿಸಿಸಿ ಬ್ಯಾಂಕ್ ನೀಡುವ ಹಣ ಖಾಸಗಿಯದ್ದಲ್ಲ. ಖಾಸಗಿ ಹಣವಾಗಿದ್ದರೆ ನಾಲ್ಕು ಗೋಡೆಗಳ ಮಧ್ಯೆ ಕೊಡಬಹುದಾಗಿತ್ತು. 1600 ಜನರಿಗೆ ಸರ್ಕಾರದಿಂದ ಹಣ ಬಿಡಗಡೆಯಾಗಿದ್ದು, ಕದ್ದು ಮುಚ್ಚಿ ಹಣ ವಿತರಣೆ ವಾಡುವ ಅವಶ್ಯಕತೆ ನನಗಿಲ್ಲ ಎಂದು ಶಾಸಕ ಕೆ.ಆರ್.ರಮೇಶ್‌ಕುವಾರ್ ಹೇಳಿದರು.

ತಾಲೂಕಿನ ಮಣಿಗಾನಹಳ್ಳಿ ವ್ಯವಸಾಯ ಸಹಕಾರ ಸಂದ ಆವರಣದಲ್ಲಿ ಶುಕ್ರವಾರ ಡಿಸಿಸಿ ಬ್ಯಾಂಕ್ ವತಿಯಿಂದ 150 ರೈತರಿಗೆ 1.47 ಕೋಟಿ ರೂಪಾಯಿ ಸಾಲ ವಿತರಣೆ ವಾಡಿ ವಾತನಾಡಿ, ಯಾರು ಏನೇ ಹೇಳಿದರೂ ಸರ್ಕಾರದಿಂದ ಕಾರ್ಯಕ್ರಮ ಆಯೋಜಿಸಿ ಸಾಲ ವಿತರಣೆ ವಾಡಲಾಗುತ್ತಿದೆ ಎಂದರು.

ಹೆಣ್ಣು ಮಕ್ಕಳು, ರೈತರಿಗೆ ಸಾಲ ನೀಡಲಾಗುತ್ತಿದೆ. ಮಣಿಗಾನಹಳ್ಳಿ ಸಹಕಾರ ಸಂದ ವತಿಯಿಂದ 150 ರೈತ ಕುಟುಂಬಗಳ 13 ಸಂಗಳಿಗೆ 1.47 ಕೋಟಿ ರೂಪಾಯಿ ಸಾಲ ವಿತರಣೆ ವಾಡಲಾಗುತ್ತಿದೆ. ಡಿಸಿಸಿ ಬ್ಯಾಂಕ್ ದಿವಾಳಿಯಾದಾಗ ವಿರೋಧಿಗಳು ಯಾರೂ ಚಕಾರವೆತ್ತಿಲ್ಲ. ಸರ್ಕಾರದೊಂದಿಗೆ ಚರ್ಚೆ ವಾಡಿ ಮರುಜೀವ ಕೊಟ್ಟಿದ್ದು ನಾನೇ. ಇದು ಕಲಿಗಾಲ, ನಿಯತ್ತಾಗಿದ್ದವರಿಗೆ ಊಟ ಸಿಗುತ್ತದೆ. ಇಲ್ಲವಾದರೆ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಪಕ್ಷತೀತಾವಾಗಿ ಸಾಲ ವಿತರಿಸಲಾಗುತ್ತಿದೆ ಎಂದರು.

ಸಾಲ, ಮನೆ, ನೀರು ವಿತರಣೆಯಲ್ಲಿ ಯಾರೂ ರಾಜಕೀಯ ಬೆರೆಸದೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಜೋಡಿಸಬೇಕು. ಸಾಲ ಪಡೆದ ಪ್ರತಿಯೊಬ್ಬರೂ ಗೌರವದಿಂದ ಬದುಕಬೇಕು ಎಂಬ ನಿಟ್ಟಿನಲ್ಲಿ ಸಾಲ ವಿತರಣೆ ಮಾಡಲಾಗುತ್ತದೆ. ರೈತರಿಗೆ ಬಡ್ಡಿರಹಿತ 3ಲಕ್ಷ ರೂಪಾಯಿ ಸಾಲ ನೀಡುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 3ಲಕ್ಷದಿಂದ 5 ಲಕ್ಷ ರೂಪಾಯಿ ಸಾಲ ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಯಾರೇ ಆದರೂ ನನ್ನ ವಾತು ಕೇಳುತ್ತಾರೆ. ನಾನು ಜನಪರವಾಗಿ ಪ್ರಾವಾಣಿಕ ಪ್ರಯತ್ನ ವಾಡುತ್ತೇನೆ ಎಂದರು.

ಈಗ ಕೆಸಿ ವ್ಯಾಲಿ ನೀರು 400 ಎಂಎಲ್‌ಡಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಆಗ 600 ಎಂಎಲ್‌ಡಿ ಹರಿಸಲಾಗುವುದು. ಕೆಸಿ ವ್ಯಾಲಿ ನೀರು ಎರಡು ಹಂತಗಳಲ್ಲಿ ಶುದ್ದೀಕರಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಮೂರು ಹಂತಗಳಲ್ಲಿ ಶುದ್ದೀಕರಣವಾಗಲಿದೆ. ಎತ್ತಿನಹೊಳೆ ಯೋಜನೆಗೆ 13,500 ಕೋಟಿ ರೂಪಾಯಿ ಹಣವನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಬಿಡುಗಡೆ ವಾಡಿತ್ತು. 12 ಸಾವಿರ ಎಚ್‌ಪಿ ಮೋಟರ್ ಅಳವಡಿಸಬೇಕು ಹಾಗೂ ಡ್ಯಾಂ ನಿರ್ವಾಣ ವಾಡಬೇಕು. ಕಾಂಗ್ರೆಸ್ ಸರ್ಕಾರ ರಚನೆಯಾದರೆ ಎತ್ತಿನಹೊಳೆಯ ನೀರು ಜಿಲ್ಲೆಯ ಕೆರೆಗಳಿಗೆ ಹರಿಸಿ, ಬಯಲು ಸೀಮೆಯನ್ನು ಮಲೆನಾಡು ಮಾಡುವ ಕನಸು ಕಂಡಿದ್ದೇನೆ ಎಂದರು.

ಕಸಾಯಿಖಾನೆ ತರೆಯುವ ಯೋಜನೆ: ಶ್ರೀನಿವಾಸಪುರ ಪಟ್ಟಣದಲ್ಲಿ ಕಸಾಯಿಖಾನೆ ತರೆಯುವ ಯೋಜನೆ ಇದ್ದು, ಸ್ಥಳದ ಅಭಾವವಿದೆ. ಪಟ್ಟಣದಲ್ಲಿ ತೆರೆದು ರೈತರಿಗೆ ಹೆಚ್ಚಿನ ಲಾಭಾಂಶ ಬರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಸಾಯಿಖಾನೆ ತೆರೆಯಲಾಗುವುದು. ಈ ವಹಿವಾಟಿನಲ್ಲಿ ಬರುವ ಲಾಭಾಂಶವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಮುಖಂಡರಾದ ಸಂಜಯರೆಡ್ಡಿ, ವ್ಯಾಕಲ ನಾರಾಯಣಸ್ವಾಮಿ, ಕೆ.ಕೆ.ಮಂಜುನಾಥ್, ಕೃಷ್ಣಾರೆಡ್ಡಿ, ಲಕ್ಷ್ಮಣರೆಡ್ಡಿ, ಸೀತಾರಾಮರೆಡ್ಡಿ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಂಜುನಾಥರೆಡ್ಡಿ, ಸಹಕಾರ ಸಂದ ಖಜಾಂಚಿ ನಾರಾಯಣರೆಡ್ಡಿ, ಕಾರ್ಯದರ್ಶಿ ಮುನಿಯಪ್ಪ ಇತರರು ಇದ್ದರು.