ನ್ಯೂಸ್

ಕರಾಚಿ ಆಸ್ಪತ್ರೆಗೆ ದಾವೂದ್ ಇಬ್ರಾಹಿಂ ದಾಖಲು! ಬಿಗಿ ಭದ್ರತೆಯಲ್ಲಿ ಭೂಗತ ಪಾತಕಿ

ಕರಾಚಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಪಾಕಿಸ್ತಾನದ ಕರಾಚಿಯಲ್ಲಿನ ಆಸ್ಪತ್ರೆಗೆ ದಾಖಲಾಗಿರುವುದಾಗಿ ಮೂಲಗಳು ತಿಳಿಸಿದ್ದು. ವಿಷ ಸೇವಿಸಿದ ಕಾರಣಕ್ಕೆ ಆಸ್ಪತ್ರೆ ಪಾಲಾಗಿದ್ದಾರೆ ಎಂದು ಊಹಿಸಲಾಗಿದೆ. ಆದ್ರೆ, ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭೂಗತ ಪಾತಕಿ ದಾವೂದ್​, ಸದ್ಯ ಆಸ್ಪತ್ರೆಯೊಳಗೆ ಬಿಗಿ ಭದ್ರತೆಯಲ್ಲಿದ್ದಾರೆ. ಕೇವಲ ಇಬ್ರಾಹಿಂಗಾಗಿ ಎಂದೇ ಒಂದು ಮಹಡಿಯನ್ನು ಬಿಟ್ಟುಕೊಡಲಾಗಿದ್ದು, ಉನ್ನತ ಆಸ್ಪತ್ರೆ ಅಧಿಕಾರಿಗಳು ಮತ್ತು ಅವರ ನಿಕಟ ಕುಟುಂಬ ಸದಸ್ಯರಿಗೆ ಮಾತ್ರ ಮಹಡಿಗೆ ಪ್ರವೇಶವಿದೆ.

ಮುಂಬೈ ಪೊಲೀಸರು ಧಾವೂದ್ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಆತನ ಸಂಬಂಧಿಕರಾದ ಅಲಿಶಾ ಪಾರ್ಕರ್ ಮತ್ತು ಸಾಜಿದ್ ವಾಗ್ಲೆ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನದಲ್ಲಿದ್ದಾರೆ. ಜನವರಿಯಲ್ಲಿ ದಾವೂದ್‌ನ ಸಹೋದರಿ ಹಸೀನಾ ಪಾರ್ಕರ್‌ನ ಮಗ ರಾಷ್ಟ್ರೀಯ ತನಿಖಾ ಸಂಸ್ಥೆಗೆ, ಇಬ್ರಾಹಿಂ ಎರಡನೇ ಮದುವೆಯಾಗಿ ಕರಾಚಿಯಲ್ಲೇ ಉಳಿಯುತ್ತಾರೆ ಎಂದು ಹೇಳಿದ್ದರು,(ಏಜೆನ್ಸೀಸ್).