ನವದೆಹಲಿ: ಮಗಳೇ ಮುಂದೆ ನಿಂತು, ತಾಯಿಗೆ ಮದುವೆ ಮಾಡಿಸಿದ್ದಾಳೆ. ತಾಯಿ ಇದೀಗ ಎರಡನೇ ಮದುವೆಯಾಗಿ ನೆಮ್ಮದಿಯ ಜೀವನ ಕಂಡುಕೊಳ್ಳುವಲ್ಲಿ ಮಗಳು ನೆರವಾಗಿದ್ದಾಳೆ. ಈ ಬಗ್ಗೆ ಬಗ್ಗೆ ರಿಯಾ ಚರ್ಕವರ್ತಿ ಎಂಬಾಕೆ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸಿದ ಬಗ್ಗೆ ತನ್ನ ಸಂತಸ ಹಂಚಿಕೊಂಡಿದ್ದಾಳೆ.
ರಿಯಾ ಚರ್ಕವರ್ತಿ ತಂದೆ ಈ ಹಿಂದೆ ನಿಧನರಾಗಿದ್ದರು. ಇದಾಗಿ ಅನೇಕ ವರ್ಷಗಳ ಕಾಲ ತಾಯಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಎರಡನೇ ವಿವಾಹವಾಗುವುದರ ಬಗ್ಗೆ ಯೋಚಿಸಿಯೂ ಇರಲಿಲ್ಲ. ಅದೊಂದು ದಿನ ನನಗೆ ಚಿಕ್ಕಮ್ಮನಿಂದ ಕರೆ ಬಂದಿತ್ತು. ಅವರು ಮಾತನಾಡುತ್ತಾ, ತಂದೆಯ ನಿಧನದ ನಂತರ ತಾಯಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ನಿನ್ನ ತಾಯಿಯನ್ನು ಒಬ್ಬರು ಇಷ್ಟಪಡುತ್ತಿದ್ದಾರೆ. ವಿವಾಹವಾಗುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅವರ ಜತೆಗೆ ವಿವಾಹ ಮಾಡಿಕೊಟ್ಟರೆ ಇಬ್ಬರೂ ನೆಮ್ಮದಿಯಿಂದ ಇರುತ್ತಾರೆ. ಈ ಬಗ್ಗೆ ಯೋಚಿಸು ಎಂದು ಹೇಳಿದ್ದರಂತೆ.
ರಿಯಾ ಚರ್ಕವರ್ತಿ ಈ ಬಗ್ಗೆ ಮಾತನಾಡುತ್ತಾ, ತಂದೆ ನಿಧನರಾದಾಗ ನನಗೆ ಕೇವಲ 2 ವರ್ಷ, ತಾಯಿಗೆ 25 ವರ್ಷ. ಈ ವೇಳೆ ಎಲ್ಲರೂ ಬಂದು ತಾಯಿಯಲ್ಲಿ ಎರಡನೇ ಮದುವೆ ಆಗಿ ಎಂದು ಹೇಳುತ್ತಿದ್ದರು. ಆದರೆ ಅಮ್ಮ ಮಾತ್ರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಚಿಕ್ಕಮ್ಮ ಫೋನಿನಲ್ಲಿ ಆಡಿದ ಮಾತುಗಳನ್ನು ರಿಯಾ ಚರ್ಕವರ್ತಿ ಗಂಭೀರದಿಂದ ಪರಿಗಣಿಸಿದ್ದರು. ನಂತರ ತನ್ನ ತಾಯಿಯನ್ನು ಪ್ರೀತಿಸುತ್ತಿರುವವರ ಜತೆಗೆ ವಿವಾಹ ಮಾಡಲು ರಿಯಾ ಮುಂದಾಗಿದ್ದಾರೆ. ಇದೀಗ ತನ್ನ ತಾಯಿಯ ವಿವಾಹವನ್ನು ನೆರವೇರಿಸಿರುವ ಸಂಭ್ರಮದಲ್ಲಿರುವ ರಿಯಾ ಚರ್ಕವರ್ತಿ, ನನ್ನಮ್ಮ ಸಂಗಾತಿಯನ್ನು ಕಂಡುಕೊಂಡಿದ್ದಾರೆ. ಇನ್ನು ಮುಂದೆ ಆಕೆ ಸಂತೋಷದಿಂದ ಇರುತ್ತಾಳೆ. ಇದು ನನ್ನ ಸಂತೋಷಕ್ಕೂ ಕಾರಣವಾಗಿದೆ ಎಂದು ಮನಬಿಚ್ಚಿ ಮಾತನಾಡಿಕೊಂಡಿದ್ದಾರೆ. (ಏಜೆನ್ಸೀಸ್)