ನ್ಯೂಸ್

ಶಶಿಧರ್‌ಗೆ ದಸರಾ ಶ್ರೀ, ಮಧುರಾಗೆ ಶ್ರೀ ದಸರಾ ಕುಮಾರಿ ಪ್ರಶಸ್ತಿ


ತೋಳ್ಬಲ ಪ್ರದರ್ಶಿಸುವಲ್ಲಿ ಯಶಸ್ವಿಯಾದ ಬೆಂಗಳೂರಿನ ಶಶಿಧರ್ ‘ದಸರಾ ಶ್ರೀ’ ಹಾಗೂ ಕೆ.ಎನ್.ಮಧುರಾ ‘ಶ್ರೀ ದಸರಾ ಕುಮಾರಿ’ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾದರು.
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪಂಜ ಕುಸ್ತಿ ಪಂದ್ಯಾವಳಿಯಲ್ಲಿ ಈ ಸಾಧನೆ ಮಾಡಿದರು.
ಬೆಂಗಳೂರಿನ ಮಂಜುನಾಥ್ ಪವಾರ್ ‘ಮೈಸೂರು ದಸರಾ ವಿಶೆೇಷ ಚೇತನ’ ಪ್ರಶಸ್ತಿ ಪಡೆದರೆ, ಬೆಂಗಳೂರಿನ ಎಸ್.ರೇಣುಕಾ ‘ಮೈಸೂರು ದಸರಾ ನವ ಚೇತನ ತಾರೆ’ ಪ್ರಶಸ್ತಿ ತನ್ನದಾಗಿಸಿಕೊಂಡರು.