ಸಿನಿಮಾ ರಂಗದ ದಿಗ್ಗಜ ನಟರಿಬ್ಬರು ಮತ್ತೆ ಒಂದಾಗ್ತಾರೆ ಎನ್ನುವ ವಿಚಾರ ಬಹುದಿನಗಳಿಂದ ಜೋರಾಗಿ ಸದ್ದು ಮಾಡುತ್ತಿತ್ತು. ಸುದೀಪ್- ದರ್ಶನ್ ಇಬ್ಬರೂ ಮತ್ತೆ ಒಂದಾಗೋದನ್ನು ನೋಡಲು ಫ್ಯಾನ್ಸ್ ಕಾದು ಕುಳಿತಿದ್ದಾರೆ. ಈ ಹೊತ್ತಲ್ಲೇ ಅಭಿಮಾನಿಗಳು ಖುಷಿ ಪಡುವಂತಹ ವಿಚಾರವೊಂದು ಹೊರ ಬಿದ್ದಿದೆ.
ಕೆಲ ವರ್ಷಗಳ ಹಿಂದೆ ಬಿಗ್ ಬಾಸ್ ಕಾರ್ಯಕ್ರಮ ಆರಂಭದ ವೇಳೆ ಸುದೀಪ್ ಗೆ ದರ್ಶನ್ ಆಲ್ ದಿ ಬೆಸ್ಟ್ ಹೇಳಿರುವ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಪೋಸ್ಟ್ ನೋಡಿ ದಚ್ಚು-ಕಿಚ್ಚ ಫ್ಯಾನ್ಸ್ ಇಬ್ಬರು ಆದಷ್ಟು ಬೇಗ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ.
ಇತ್ತೀಚೆಗಷ್ಟೇ ಹಿರಿಯ ನಟಿ ಸುಮಲತಾ ಅವರ ಬರ್ತ್‌ಡೇ ಸೆಲೆಬ್ರೇಷನ್ ನಡೆಯಿತು. ಸುಮಲತಾ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಕಿಚ್ಚ ಸುದೀಪ್ ಹಾಗೂ ದಾಸ ದರ್ಶನ್ ಭಾಗವಹಿಸಿದ್ದರು. ಒಂದೇ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದರಿಂದ ಮತ್ತೆ ಕಿಚ್ಚ-ದಚ್ಚು ಒಂದಾಗುತ್ತಾರೆ ಅಂತಲೇ ಅನೇಕರು ಭಾವಿಸಿದ್ದರು. ಈ ಬಗ್ಗೆಯೂ ಇಂದು ಪ್ರೆಸ್‌ಮೀಟ್‌ನಲ್ಲಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ‘’ದರ್ಶನ್ ಬಗ್ಗೆ ನನಗೆ ದ್ವೇಷ ಇಲ್ಲ, ಕೋಪವೂ ಇಲ್ಲ’’ ಎಂದಿದ್ದರು ಕಿಚ್ಚ ಸುದೀಪ್.
ಇನ್ನು ‘’ಮಾಧ್ಯಮದವರು ಹಾಗೂ ದರ್ಶನ್ ಮಧ್ಯೆ ಎಲ್ಲವೂ ಸರಿಹೋಗಿರೋದು ನಿಜವಾಗಿಯೂ ನನಗೆ ಖುಷಿ ತಂತು. ಕೆಲವು ಗೊತ್ತಿಲ್ಲದೆ ನಡೆದು ಹೋಗುತ್ತವೆ. ದರ್ಶನ್ ಈಸ್ ಎ ಬಿಗ್ ನೇಮ್, ಬಿಗ್ ಸ್ಟಾರ್, ಬಿಗ್ ಆಕ್ಟರ್. ಸಿನಿಮಾ ಸೋಲು-ಗೆಲುವಿನ ಮೇಲೆ ಮಾತ್ರ ನಡೆಯುತ್ತಿರಬೇಕು. ಈ ತರಹದ ವಿಚಾರಗಳು ನಡೆಯಬಾರದು. ಈಗ ಸಮಸ್ಯೆ ಪರಿಹಾರ ಆಗಿರೋದಕ್ಕೆ ನಾನು ಹ್ಯಾಪಿಯಾಗಿದ್ದೇನೆ ಎಂದಿದ್ದರು ಕಿಚ್ಚ ಸುದೀಪ್.
ಒಟ್ಟಾರೆಯಾಗಿ ದರ್ಶನ್ ಬಿಗ್ಬಾಸ್ ಕಾರ್ಯಕ್ರಮಕ್ಕಾಗಿ ಕಿಚ್ಚ ಸುದೀಪ್ಗೆ ವಿಶ್ ಮಾಡಿದ ಪೋಸ್ಟ್ ಇದೀಗ ಎಕ್ಸ್(ಈಗಿನ ಟ್ವಿಟ್ಟರ್)ನಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಇವರಿಬ್ಬರನ್ನ ಒಟ್ಟಾಗಿ ನೋಡಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.