ನ್ಯೂಸ್

ನಟ ದರ್ಶನ್ ಬಂಧನ; ಪ್ರಕರಣದಿಂದ ಮುಕ್ತರಾಗಬೇಕೆಂದು ವಿಶೇಷ ಪೂಜೆ ಮಾಡಿದ ಭಾವ

ಕಾರವಾರ: ಚಿತ್ರದುರ್ಗದ ರೇಣುಕಸ್ವಾಮಿ ಎಂಬ ಯುವಕನನ್ನು ಅಪಹರಿಸಿ, ಮನಬಂದಂತೆ ಥಳಿಸಿ, ಕೊಲೆ ಮಾಡಿರುವ ಆರೋಪದ ಮೇಲೆ ನಟ ದರ್ಶನ್​​ ಸೇರಿ 17 ಮಂದಿ ಬಂಧನವಾಗಿದೆ. ದರ್ಶನ್​ ಮಾಡಿರುವ ಈ ಹೀನ ಕೃತ್ಯದ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಪರ ಹಾಗೂ ವಿರೋಧವಾಗಿ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಪೊಲೀಸರು ಈ ಕರಿತಾಗಿ ತನಿಖೆ ಕೈಗೊಂಡಿದ್ದಾರೆ. ಆದರೆ ಇತ್ತ ದರ್ಶನ್​ ಅವರ ಅಕ್ಕನ ಗಂಡ ಭಾವ ಈ ಪ್ರಕರಣದಿಂದ ಮುಕ್ತರಾಗಬೇಕು ಎಂದು ದೇವರ ಮೊರೆ ಹೋಗಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ದರ್ಶನ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಾವ ಮಂಜುನಾಥ್.. ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮುಕ್ತರಾಗಬೇಕೆಂದು ವಿಶೇಷ ಪೂಜೆ ಮಾಡಿದ್ದಾರೆ.

ಕೈಗಾ ವಸತಿ ಸಂಕೀರ್ಣದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ವಸತಿ ಸಂಕೀರ್ಣ ದೇವರಿಗೆ ಪೂಜೆ ಸಲ್ಲಿಸಿದ ದರ್ಶನ್ ಸೋದರಿಯ ಪತಿ ಮಂಜುನಾಥ್.. ಶನೈಶ್ವರ ಹಾಗೂ ಆಂಜನೇಯನಿಗೂ ಪೂಜೆ ಸಲ್ಲಿಸಿದ್ದಾರೆ.

 ದೇವರ ವಿಶೇಷ ಪೂಜೆ ಬಳಿಕ ಮಾತನಾಡಿದ ದರ್ಶನ್ ಸೋದರಿಯ ಪತಿ ಮಂಜುನಾಥ್,ಈ ಪ್ರಕರಣ ನಡೆದಿರುವುದು ಬೇಸರ ಸಂಗತಿಯಾಗಿದೆ. ದರ್ಶನ್​​ ಅವರು ಎಂತಹ ಮನುಷ್ಯ ಎಂದರೆ ಅವರು ಸಂಪಾದನೆ ಮಾಡಿರುವ ಕೋಟ್ಯಾಂತರ ರೂಪಾಯಿ ಹಣದಲ್ಲಿ ಮುಕ್ಕಾಲು ಭಾಗವನ್ನು ದಾನ, ಧರ್ಮ ಮಾಡಿದ್ದಾರೆ. ಅವರು ಶಾಂತವಾಗಿ ಇದ್ರು ಕೂಡ ಇರಲು ಬಿಡುವುದಿಲ್ಲ.. ಏನಾದ್ರು ಒಂದು ಕಿರಿಕಿರಿ ಮಾಡಿ ಕೋಪ ಬರುವ ಹಾಗೆ ಅವರಿಗೆ ಮಾಡುತ್ತಾರೆ. ಇಷ್ಟೆಲ್ಲ ಆದ್ರೂ ಕೂಡಾ ಇವರಿಗೆ ಇನ್ನು ಇಷ್ಟೊಂದು ಅಭಿಮಾನಿಗಳಿದ್ದಾರೆ ಎಂದರೆ ಕಾರಣ ಇವರು ಮಾಡುತ್ತಿದ್ದ ಒಳ್ಳೆಯ ಕೆಲಸದಿಂದ. ಒಳ್ಳೆಯತನ , ಒಳ್ಳೆಯ ಕೆಲಸ ದರ್ಶನ್​​ ಅವರನ್ನು ಕಾಪಾಡುತ್ತಿದೆ. ಮೊದಲಿಂದಲೂ ದರ್ಶನ್​​ ಅವರನ್ನು ನೋಡುತ್ತಿದ್ದೇವೆ. ಅವರಿಗೆ ಒಳ್ಳೆಯ ಗುಣ ಇದೆ ಎಂದಿದ್ದಾರೆ.