ನ್ಯೂಸ್

ಇನ್ಮುಂದೆ ದರ್ಶನ್ 'ಕರುನಾಡ ಅಧಿಪತಿ'; ಯಾರು ಕೊಟ್ರು ಈ ಬಿರುದು?

ಬೆಂಗಳೂರು: ಇತ್ತೀಚೆಗಷ್ಟೇ 'ಕಾಟೇರ' ಸಿನಿಮಾದ ಭರ್ಜರಿ ಸಕ್ಸಸ್ ಆಚರಿಸಿದ ಚಿತ್ರತಂಡ​, ವಿದೇಶ ನೆಲದಲ್ಲೂ ಚಿತ್ರವನ್ನು ರಿಲೀಸ್ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈ ಬಗ್ಗೆ ನಿರ್ಮಾಪಕರಾದ ರಾಕ್​ಲೈನ್​ ವೆಂಕಟೇಶ್ ಕೂಡ​ ಮಾಹಿತಿ ನೀಡಿದ್ದಾರೆ. ನಿನ್ನೆಯಷ್ಟೇ ದುಬೈನಲ್ಲಿ ಆಯೋಜಿಸಲಾಗಿದ್ದ ಚಿತ್ರದ ವಿಶೇಷ ಶೋಗೆ ನಟ ದರ್ಶನ್​ ಆಗಮಿಸಿ, ಪ್ರೇಕ್ಷಕರೊಂದಿಗೆ ಕಾಟೇರ ವೀಕ್ಷಿಸಿದರು.

ದರ್ಶನ್​ ನೋಡಿ ಫುಲ್​ ಖುಷ್ ಆದ ದುಬೈ ಕನ್ನಡಿಗರು, ನಟನಿಗೆ ಹೊಸ ಬಿರುದನ್ನು ಕೊಟ್ಟಿದ್ದಾರೆ. ಹೌದು, ಇನ್ಮುಂದೆ ದರ್ಶನ್​ ಕರುನಾಡ ಅಧಿಪತಿ. ಹಲವು ವರ್ಷಗಳ ಹಿಂದೆ ಚಾಲೆಂಜಿಂಗ್​​ ಸ್ಟಾರ್​​ ಎಂಬ ಬಿರುದನ್ನು ನೀಡಿದ್ದರು. ಇದೀಗ ಅದರೊಟ್ಟಿಗೆ ಈ ಟೈಟಲ್ ಕೂಡ ಕೊಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಕ್ಕೆ ಕರುನಾಡ ಅಧಿಪತಿ ಎಂದು ದುಬೈ ಕನ್ನಡಿಗರು ಬಿರುದು ಕೊಟ್ಟಿದ್ದಾರೆ. 'ಚೌಕ', 'ರಾಬರ್ಟ್'​, 'ಕಾಟೇರ' ಸಿನಿಮಾಗಳ ಮೂಲಕ ಮತ್ತೊಮ್ಮೆ ಯಶಸ್ವಿ ನಿರ್ದೆಶಕರು ಎಂದು ಕರೆಸಿಕೊಂಡ ತರುಣ್​ ಸುಧೀರ್​ಗೆ ಹ್ಯಾಟ್ರಿಕ್​ ಡೈರೆಕ್ಟರ್​ ಎಂದು ದುಬೈ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.