ನ್ಯೂಸ್

ದರ್ಶನ್-ವಿಜಯಲಕ್ಷ್ಮೀ ದಾಂಪತ್ಯ ಜೀವನಕ್ಕೆ 22 ವರ್ಷದ ಸಂಭ್ರಮ! ಹ್ಯಾಪಿ ವೆಡ್ಡಿಂಗ್ ಆನಿವರ್ಸರಿ ಅಣ್ಣ ಅತ್ತಿಗೆ ಎಂದ ಫ್ಯಾನ್ಸ್

ಬೆಂಗಳೂರು: ( darshan and vijayalakshmi wedding anniversary ) ಸ್ಯಾಂಡಲ್​​ವುಡ್​ ನಟ ದರ್ಶನ್ ಮತ್ತು ವಿಜಯಲಕ್ಷ್ಮೀ ಅವರ ಇಂದು (ಮೇ 19)  22ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಜೋಡಿದ ಮುದ್ದಾದ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.

ಕಳೆದ ವರ್ಷ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ದಂಪತಿ ದುಬೈನಲ್ಲಿ ಬಹಳ ಅದ್ಧುರಿಯಾಗಿ ತಮ್ಮ 21ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ವರ್ಷ ಅವರು ರೆಸಾರ್ಟ್​ವೊಂದರಲ್ಲಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

22ನೇ ವಿವಾಹ ವಾರ್ಷಿಕೋತ್ಸವ ಸಂಬಂಧ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಪತಿಯ ಜೊತೆಗೆ ನಿಂತುಕೊಂಡಿರೋ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ (eternally) ಶಾಶ್ವತ ಅಂತ ಬರೆದುಕೊಂಡಿದ್ದಾರೆ.  ಅಭಿಮಾನಿಗಳು ಈ ಜೋಡಿಯ ಫೋಟೋಗೆ ಮೆಚ್ಚುಗೆ ಸೂಚಿಸಿ ಶುಭಕೊರಿದ್ದಾರೆ.

2003 ಮೇ 19ರಂದು ನಟ ದರ್ಶನ್​ ಹಾಗೂ ವಿಜಯಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಟ ದರ್ಶನ್​ ಹಾಗೂ ವಿಜಯಲಕ್ಷ್ಮಿ ಅವರು ಧರ್ಮಸ್ಥಳದ ವಸಂತ್​ ಮಹಲ್‌ನಲ್ಲಿ ಮದುವೆಯಾಗಿದ್ದರು. ದರ್ಶನ್​ ಹಾಗೂ ವಿಜಯಲಕ್ಷ್ಮಿ ಇಬ್ಬರ ಮದುವೆ ಆಮಂತ್ರಣ ಪತ್ರ ಕೂಡ ವೈರಲ್​ ಆಗಿದೆ. ವಿಜಯಲಕ್ಷ್ಮೀ ಕೆಮಿಕಲ್​ ಇಂಜಿನಿಯರ್ ಪದವೀಧರೆ​.  ದರ್ಶನ್​-ವಿಜಯಲಕ್ಷ್ಮಿ ಪುತ್ರನ ಹೆಸರು ವಿನೀಶ್​.

‘ದರ್ಶನ್ ಅವರ ವಿವಾಹ ಆಮಂತ್ರಣ ಪತ್ರ ವೈರಲ್​ ಆಗಿದೆ. 19-05-2003ರ ಸೋಮವಾರ ಬೆಳಿಗ್ಗೆ 9:10ರಿಂದ 9:50ರವರೆಗಿನ ಮಿಥುನ ಲಗ್ನದಲ್ಲಿ ನಾವು ವಿವಾಹವಾಗುತ್ತಿದ್ದೇವೆ. ಧರ್ಮಸ್ಥಳದ ವಸಂತ್​ ಮಹಲ್​ನಲ್ಲಿ ಮದುವೆ ನಡೆಯಲಿದೆ. ಎಲ್ಲರೂ ಮದುವೆಗೆ ಆಗಮಿಸಬೇಕು ಎಂದು ಆಮಂತ್ರಣ ಕೋರುತ್ತಿದ್ದೇನೆ’ ಎಂಬುದಾಗಿ ಆಮಂತ್ರಣ ಪತ್ರದಲ್ಲಿ ಬರೆಯಲಾಗಿತ್ತು.