ಸಂಗೀತವೇ ಹಾಗೆ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿಬಿಡುತ್ತದೆ. ಇನ್ನು ಮುಗ್ಧ ಜನರ ಪಾಡೇನು ಹೇಳಿ?
ಈ ವಿಡಿಯೋದಲ್ಲಿರುವ ಮಗು ನೋಡಿ. ಇಂತಹ ಮುಗ್ಧ ಕಂದಮ್ಮ ಕಾರಿನಲ್ಲಿ ಕೇಳಿಬರುತ್ತಿರುವ ಸಂಗೀತಕ್ಕೆ ತಲೆದೂಗುವ, ಮೈ ಕುಲುಕುವ ರೀತಿ ಯಾರನ್ನೂ ಮೋಡಿ ಮಾಡದೇ ಇರದು. ರೆಕ್ಸ್ ಚಾಪ್ ಮ್ಯಾನ್ ಎಂಬುವವರು ಇದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇದು ಜೋನಸ್ ಬ್ರದರ್ಸ್ ಅವರು ಸಂಗೀತ ಸಂಯೋಜಿಸಿರುವ ಸಕ್ಕರ್ ಆಲ್ಬಮ್ನ ಓಲ್ಡ್ ಟೌನ್ ರೋಡ್ ಎಂಬ ಗೀತೆಗೆ ಈ ಮಗು ತಲೆದೂಗಿರುವುದು. ಇದಕ್ಕೆ ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ. ಹಾಗೆಯೇ ಇದರ ಬಗ್ಗೆ ಇನ್ನು ಕೆಲವರು ಕಾಳಜಿಯ ಮಾತುಗಳನ್ನು ಹೇಳಿದ್ದಾರೆ.
ಕಾರಿನಲ್ಲಿ ಬೇಬಿ ಸೀಟ್ನಲ್ಲಿ ಕುಳಿತಿರುವ ಪುಟಾಣಿ, ಸೀಟ್ ಬೆಲ್ಟ್ ಹಾಕಿ ಕೊಂಡಿದೆ. ಆದರೆ ಅದು ಸಡಿಲವಾಗಿದ್ದು ಆ ಮಗು ಮೈದೂಗಲು ಅನುಕೂಲ ಮಾಡಿಕೊಟ್ಟಿದೆ. ಇದು ಒಳ್ಳೆಯದಲ್ಲ ಎಂಬುದು ಕೆಲವರ ಕಾಳಜಿ.
"ಯಾರಾದರೂ ಆ ಪುಟಾಣಿಯ ಸೀಟ್ ಬೆಲ್ಟ್ನ್ನು ಬಿಗಿಗೊಳಿಸಿ" ಎಂದು ಕಮೆಂಟ್ ಮಾಡಿದ್ದಾರೆ. ಏಕೆಂದರೆ ಅದು ಸುರಕ್ಷಿತವಲ್ಲ ಎನ್ನುವುದು ಅವರ ಅಭಿಪ್ರಾಯ.
ಈ ಪುಟಾಣಿಗೆ ಅದೆಷ್ಟು ಸಂಗೀತದ ಮೋಹ ಇದೆ. ನನಗಿಂತ ಹೆಚ್ಚು ಸಂಗೀತದ ಪ್ರೀತಿ ಈಕೆಗೆ. ಮೂಗಿನ ಮೇಲೆ ಬೆರಳಿಡುವಷ್ಟು ಕ್ಯೂಟ್" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಓಹ್ ಇದು ಕ್ಯೂಟ್ಗಿಂತ ಹೆಚ್ಚಿನದು ಎಂದಿದ್ದಾರೆ. (ಏಜೆನ್ಸೀಸ್)