ನ್ಯೂಸ್

VIDEO | ಕೈಯಲ್ಲಿ ಗನ್​ ಹಿಡಿದು ನಡುರಸ್ತೆಯಲ್ಲಿ ನಿಂತು ಡಾನ್ಸ್​​ ಮಾಡಿದ ಯುವತಿ!

ಲಕ್ನೋ: ಸೋಶಿಯಲ್​​ ಮೀಡಿಯಾದಲ್ಲಿ ರೀಲ್‌ಗಳನ್ನು ಹಂಚಿಕೊಳ್ಳುವುದೆ ಅನೇಕ ಜನರಿಗೆ ದೈನಂದಿನ ದಿನಚರಿಯಾಗಿದೆ. ನೃತ್ಯ, ಮಾಡೆಲಿಂಗ್ ಮತ್ತು ವಿಚಿತ್ರ ಪ್ರಯೋಗಗಳನ್ನು ಮಾಡುವ ವೀಡಿಯೊಗಳನ್ನು ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ನಿಯಮಗಳನ್ನು ಉಲ್ಲಂಘಿಸಿ ವೀಡಿಯೋ ತೆಗೆಯುವುದರಿಂದ ಅನೇಕರು ತೊಂದರೆಗೆ ಸಿಲುಕುತ್ತಿದ್ದಾರೆ.

ಗನ್ ಹಿಡಿದು ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ ಹುಡುಗಿ ವಿಡಿಯೋ ವೈರಲ್ ಆಗಿದ್ದು, ವೈರಲ್ ವಿಡಿಯೋ ಇನ್‌ಫ್ಲುಯೆನ್ಸರ್ ಲಕ್ನೋ ಹೈವೇಯಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ಡ್ಯಾನ್ಸ್ ಮಾಡಿದ್ದಾರೆಂದು ಲಕ್ನೋ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ಜನಪ್ರಿಯ ಯೂಟ್ಯೂಬರ್ ಸಿಮ್ರಾನ್ ಯಾದವ್ ಕೈಯಲ್ಲಿ ಗನ್ ಹಿಡಿದು ರಸ್ತೆ ಮಧ್ಯೆ ನಿಂತು ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಲಕ್ನೋದ ಹೆದ್ದಾರಿಯಲ್ಲಿ ತೆಗೆಯಲಾಗಿದೆಯಂತೆ. ಭೋಜ್‌ಪುರಿ ಹಾಡಿಗೆ ಸಿಮ್ರಾನ್ ಡ್ಯಾನ್ಸ್ ಮಾಡಿದ್ದಾರೆ. ಪಾದಚಾರಿ ಮಾರ್ಗದಲ್ಲಿ ಆಕೆಯ ಕೈಯಲ್ಲಿ ಬಂದೂಕನ್ನು ತೋರಿಸಿ ಈ ವಿಡಿಯೋವನ್ನು ತೆಗೆಯಲಾಗಿದೆ. ಈ ಬಗ್ಗೆ ಅಧಿಕಾರಿಗಳು ಏಕೆ ಮೌನವಾಗಿದ್ದಾರೆ ಎಂದು ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಈ ಪೋಸ್ಟ್ ಮಾಡಲಾಗಿದೆ.

ಆಕೆ ಪಾದಚಾರಿ ಮಾರ್ಗದಲ್ಲಿ ಗನ್ ಹಿಡಿದು ಪೋಸ್ ನೀಡಿದ ರೀತಿಗೆ ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಲಕ್ನೋ ಪೊಲೀಸರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಸಿಮ್ರಾನ್ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ.