ಸಿಡ್ನಿ: ರಕ್ಷಣಾ ಇಲಾಖೆ ಎಂದರೆ ಶಿಸ್ತು. ಅಲ್ಲಿ ಅಶಿಸ್ತು ಕಂಡುಬರುವುದು ಅಪರೂಪ. ಇನ್ನು ಅಲ್ಲಿನ ಕಾರ್ಯಕ್ರಮಗಳಂತೂ ಶಿಸ್ತಿಗೆ ಹೆಸರು ವಾಸಿ.
ಆದರೆ, ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ನೌಕಾದಳದ ಸಮಾರಂಭವೊಂದರಲ್ಲಿ ಕಾರ್ಯಕ್ರಮ ಸಂಘಟಕರು ವಿದ್ಯಾರ್ಥಿನಿಯರಿಂದ ಅಸಭ್ಯ ನೃತ್ಯ ಮಾಡಿಸಿದ್ದಾರೆ. ಅದು ಕೂಡ ಆ ದೇಶದ ನೌಕಾ ದಳದ ಉನ್ನತ ಅಧಿಕಾರಿಗಳು ಹಾಗೂ ಗವರ್ನರ್ ಎದುರು.
ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಒಂದು ವೈರಲ್ ಆಗಿದೆ. ಸಿಡ್ನಿಯ Woolloomooloo ಎಂಬ ನೌಕಾನೆಲೆಯಲ್ಲಿ ಆಸ್ಟ್ರೇಲಿಯಾ ನೌಕಾದಳದ ಹೊಸ ಹಡಗಿನ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ತುಂಡುಡುಗೆ ತೊಟ್ಟ 8 ವಿದ್ಯಾರ್ಥಿನಿಯರು ಅಸಭ್ಯ ಎನಿಸುವಂತಹ ಡ್ಯಾನ್ಸ್ ಮಾಡಿದ್ದಾರೆ.
ಈ ನೃತ್ಯವನ್ನು ಆಸ್ಟ್ರೇಲಿಯಾದ ರಕ್ಷಣಾ ಇಲಾಖೆ ಖಂಡಿಸಿದ್ದಲ್ಲದೇ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ನೌಕಾಸೇನೆ ಎಂದರೆ ಶಿಸ್ತಿಗೆ ಇನ್ನೊಂದು ಹೆಸರು. ಅಂತಹುದರಲ್ಲಿ ವಿದ್ಯಾರ್ಥಿನಿಯರಿಂದ ಅಸಭ್ಯ ನೃತ್ಯ ಮಾಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.