ನ್ಯೂಸ್

ಕುಡಿದ ಮತ್ತಿನಲ್ಲಿ ವಾಹನಗಳ ಜಖಂ

ಮಂಜುನಾಥ.ಕೆ

ಬೆಂಗಳೂರು: ಕುಡಿದ ಮತ್ತಿನಲ್ಲಿ ಮನೆ ಮುಂದೆ ನಿಂತಿರುವ ವಾಹನದ ಮೇಲೆ ಕಲ್ಲು ಎತ್ತಿಹಾಕಿ ಗ್ಲಾಸ್ ಪುಡಿ ಮಾಡಿದ ಘಟನೆ ಕೆಂಗೇರಿ ಸಮೀಪದ ಶ್ರೀನಿವಾಸಪುರ ಕಾಲನಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬೈಕ್‌ನಲ್ಲಿ ಬಂದಿದ್ದ ಇಬ್ಬರು ಫುಟ್‌ಪಾತ್ ಮೇಲೆ ಇದ್ದಂತಹ ಕಲ್ಲನ್ನು ತೆಗೆದುಕೊಂಡು ರಸ್ತೆ ಪಕ್ಕದಲ್ಲಿ ನಿಂತಿದ್ದ ೫ ಹೆಚ್ಚು ವಾಹನಗಳ ಗ್ಲಾಸ್ ಹೊಡೆದು ಹಾಕಿ ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೆಂಗೇರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆ ಕುಡಿದ ಮತ್ತಿನಲ್ಲಿ ಸಂಬಂಧಿಕರು ಹೊಡೆದಾಡಿಕೊಂಡು ವಾಹನದ ಮೇಲೆ ಕಲ್ಲು ಎತ್ತಿ ಹಾಕಿರುವುದು ಕಂಡು ಬಂದಿದೆ. ಈ ಸಂಬಂಧ ದೂರು ನೀಡುವಂತೆ ಪೊಲೀಸರು ಸೂಚಿಸಿದ್ದು, ದೂರು ನೀಡಲು ವಾಹನದ ಮಾಲೀಕರು ನಿರಾಕರಿಸಿದ್ದು, ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.