ನಂಜನಗೂಡು: ಕಲಾರಾಧನೆ ಮತ್ತು ಧೈವಾರಾಧನೆ ಮೂಲಕ ಸಮಾಜದಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುವ ಶಿವಾರ್ಚಕ ಸಮುದಾಯ ಜನರು ಆರ್ಥಿಕವಾಗಿ ಹಿಂದುಳಿದಿದ್ದು, ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲಕ ಮುನ್ನೆಲೆಗೆ ಬರಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.
ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಗಳವಾರ ದಕ್ಷಿಣಕಾಶಿ ಶಿವಾರ್ಚಕರು ಮತ್ತು ವೀರಗಾಸೆ ನೃತ್ಯ ಕಲಾವಿದರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶಿವಾರ್ಚಕರು ಮತ್ತು ವೀರಗಾಸೆ ಕಲಾವಿದರ ನೃತ್ಯ ಸಂಘದ ಕಾರ್ಯಚಟುವಟಿಕೆಗಳಿಗೆ ನೆರವು ನೀಡಲಾಗುವುದು. ಸಂಘದ ಕಟ್ಟಡ ನಿರ್ಮಾಣಕ್ಕೆ ನಿವೇಶನ ಒದಗಿಸುವ ಕುರಿತು ಚಿಂತಿಸಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಅಯ್ಯಪ್ಪಸ್ವಾಮಿ ದೇವಾಲಯದ ಗುರುಸ್ವಾಮಿ ಪಿ.ದೇವರಾಜು, ಅರ್ಚಕ ನೀಲಕಂಠ ದೀಕ್ಷಿತ್, ಪುರಸಭೆ ಮಾಜಿ ಉಪಾಧ್ಯಕ್ಷ ಮಂಜುನಾಥ್, ಜಿಲ್ಲಾ ಪತ್ರ ಬರಹಗಾರರ ಸಂಘದ ಮುಖಂಡ ಬದನವಾಳು ಮಹದೇವಪ್ಪ, ಡಿವೈಎಸ್ಪಿ ವಿ.ಗೋವಿಂದರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ದೇಬೂರು ಅಶೋಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯಕ, ಹುರಾ ಮಾರುತಿ, ಎಚ್.ಆರ್. ಚಂದ್ರು, ಅಧ್ಯಕ್ಷ ಶಿವರುದ್ರ, ಉಪಾಧ್ಯಕ್ಷ ಎಂ.ನಿತೀಶ್, ಕಾರ್ಯದರ್ಶಿ ದಯಾನಂದ್ ಪ್ರಸಾದ್, ಹಲ್ಲರೆ ಬಸವಣ್ಣ, ಶ್ರೀಕಂಠಪ್ಪ, ಡಿ.ಮಹದೇವಪ್ಪ, ನಾಗರಾಜಪ್ಪ, ನೇರಳೆ ಶಿವಕುಮಾರ್ ಇತರರು ಭಾಗವಹಿಸಿದ್ದರು.