ನ್ಯೂಸ್

ದಕ್ಷಿಣ ಕನ್ನಡ ಅಕಾಲಿಕ ಮಳೆ ಕೃಷಿಕರು ತತ್ತರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ ತಾಲೂಕಿನ ವಿವಿಧ ಕಡೆ ಶುಕ್ರವಾರ ಬೆಳಗ್ಗೆ ಅಕಾಲಿಕ ಮಳೆಯಾಗಿದ್ದು, ಅಡಕೆ ಕೃಷಿಕರು ತತ್ತರಗೊಂಡಿದ್ದಾರೆ.

ವಿಟ್ಲ, ಈಶ್ವರಮಂಗಲ, ಇಡ್ಕಿದು ಮೊದಲಾದ ಕಡೆ ಮಳೆಯಾಗಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದೆ. ಅಡಕೆ ಕೃಷಿಕರ ಅಂಗಳದಲ್ಲಿ ಅಡಕೆ ಒಣಗಲು ಹಾಕಿರುವುದು ಮಳೆಗೆ ಒದ್ದೆಯಾಗಿದೆ. ಎರಡು ದಿನಗಳ ಹಿಂದೆ ಸುಬ್ರಹ್ಮಣ್ಯ, ಬೆಳ್ಳಾರೆ, ಉಪ್ಪಿನಂಗಡಿ ಮೊದಲಾದ ಕಡೆ ಏಕಾಏಕಿ ರಾತ್ರಿ ವೇಳೆ ಮಳೆಯಾಗಿದೆ.