ನ್ಯೂಸ್

ಬಿಗ್​ಬಾಸ್ ಸೀಸನ್ 19ರಲ್ಲಿ ನಾನು ಭಾಗವಹಿಸುತ್ತಿಲ್ಲ... ನಟಿ ಡೈಸಿ ಸ್ಪಷ್ಟನೆ| BiggBoss19

BiggBoss19 : ಇನ್ನೇನು ಕೆಲವೇ ದಿನಗಳಲ್ಲಿ ಸಲ್ಮಾನ್​ ಖಾನ್​ ನಿರೂಪಣೆಯ ಹಿಂದಿ ಬಿಗ್​ಬಾಸ್​ ಸೀಸನ್​ 19 ತೆರೆ ಮೇಲೆ ಬರಲು ಸಜ್ಜಾಗಿದೆ. ಇನ್ನೂ ಈ ಬಾರಿಯ ಬಿಗ್​ಬಾಸ್​ ಕಾರ್ಯಕ್ರಮಕ್ಕೆ ಹಲವಾರು ನಾಯಕ, ನಾಯಕಿಯರ ಹೆಸರು ಕೇಳಿ ಬಂದಿದೆ. ಅದರಲ್ಲಿ ಜೈ ಹೋ ಮತ್ತು ರೇಸ್ 3 ಚಿತ್ರಗಳಲ್ಲಿ ನಟಿಸಿದ್ದ ನಟಿ ಡೈಸಿ ಅವರ ಹೆಸರು ಕೂಡ ಸಾಕಷ್ಟು ಚರ್ಚೆಯಲ್ಲಿತ್ತು. ಇದೀಗ ಈ ಬಗ್ಗೆ ಸ್ವತಃ ನಟಿ ಡೈಸಿ ಅವರೇ ಮಾತನಾಡಿದ್ದು, ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ವಿವಾದಾತ್ಮಕ ರಿಯಾಲಿಟಿ ಶೋ ಬಗ್ಗೆ ಊಹಾಪೋಹಗಳು ಎಲ್ಲೆಡೆ ಸೃಷ್ಟಿಯಾಗಿದ್ದು, ಸೀಸನ್​ 19ರಲ್ಲಿ ಹಲವಾರು ನಟ ನಟಿಯರು ಭಾಗವಹಿಸುತ್ತಾರೆ ಎಂದು ಸುದ್ದಿಯಾಗುತ್ತಿದೆ.

ನಟಿ ಡೈಸಿ ಹೇಳಿದ್ದೇನು?

ಈ ಊಹಾಪೋಹಗಳಿಗೆ ನಟಿ ಡೈಸಿ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ನಿನ್ನೆ (ಜುಲೈ16)ಪ್ರತಿಕ್ರಿಯಿಸಿದ್ದು, ಎಲ್ಲಾ ವದಂತಿಗಳನ್ನು ತಳ್ಳಿಹಾಕುತ್ತಿದ್ದೇನೆ, ನಾನು ಬಿಗ್​ಬಾಸ್​ನಲ್ಲಿ ಸ್ಪರ್ಧಿಸುತ್ತಿಲ್ಲ, ಬಹುಶಃ ಇನ್ನೆಂದಿಗೂ ನಾನು ಸ್ಪರ್ಧೆ ಮಾಡುವುದಿಲ್ಲ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಇನ್ನೂ ಹಿಂದಿ ಬಿಗ್​ಬಾಸ್ ಕಾರ್ಯಕ್ರಮ​ ಸೆಪ್ಟೆಂಬರ್​ ಅಥವಾ ಅಕ್ಟೋಬರ್​ನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಈ ಬಾರಿ ಜುಲೈನಲ್ಲೇ ಪ್ರಾರಂಭವಾಗಿ ಮುಂದಿನ ಜನವರಿಯಲ್ಲಿ ಅಂತ್ಯ ಕಾಣುವ ಸಾಧ್ಯತೆ ಇದೆ. ಸರಿ ಸುಮಾರು 6 ತಿಂಗಳುಗಳ ಕಾಲ ನಡೆಯುವಂತಹ ಶೋ ಇದಾಗಿದೆ.

ಇನ್ನೂ ಈ ಬಾರಿಯ ಬಿಗ್​ಬಾಸ್​ನಲ್ಲಿ ಲತಾ ಸಬರ್ವಾಲ್, ಅಪೂರ್ವ ಮುಖಿಜಾ, ಪುರವ್ ಝಾ, ನೀಲ್ ಮೋಟ್ವಾನಿ, ಅರ್ಹಾನ್ ಅನ್ಸಾರಿ, ಶಶಾಂಕ್ ವ್ಯಾಸ್, ಖುಷಿ ದುಬೆ, ಶರದ್ ಮಲ್ಹೋತ್ರಾ, ಮೂನ್ ಬ್ಯಾನರ್ಜಿ, ರಾಮ್ ಕಪೂರ್ ಮತ್ತು ಗೌತಮಿ ಕಪೂರ್ ಸೇರಿದಂತೆ ಮುಂತಾದವರ ಹೆಸರು ಕೇಳಿಬರುತ್ತಿದೆ.

(ಏಜೆನ್ಸೀಸ್)