ಹೊಸನಗರ ತಾಲೂಕು ತ್ರಿಣಿವೆಯಲ್ಲಿ ಜಾನುವಾರು ಗಣತಿಗೆ ಶಿಮುಲ್ ಅಧ್ಯಕ್ಷ ವಿದ್ಯಾಧರ ಚಾಲನೆ ನೀಡಿದರು. ಡಾ. ನಟರಾಜ, ಸಿಬ್ಬಂದಿ ಇದ್ದರು. 
ನ್ಯೂಸ್

ಹೈನುಗಾರಿಕೆಗೆ ಉತ್ತೇಜನ ಅವಶ್ಯಕ

ಹೊಸನಗರ: ಹೈನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಾನುವಾರು ಗಣತಿ ಮಹತ್ವವಾಗಿದೆ ಎಂದು ಶಿಮುಲ್ ಅಧ್ಯಕ್ಷ ವಿದ್ಯಾಧರ ಹೇಳಿದರು.

ತಾಲೂಕಿನ ತ್ರಿಣಿವೆ ಗ್ರಾಮದಲ್ಲಿ ಪಶುವೈದ್ಯ ಇಲಾಖೆ ಸಿಬ್ಬಂದಿಗೆ ಸಾಕು ಜಾನುವಾರು ಕುರಿತು ಮಾಹಿತಿ ನೀಡುವ ಮೂಲಕ ತಾಲೂಕು ಜಾನುವಾರು ಗಣತಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಗಣತಿಯನ್ನು ಸೂಕ್ತ ಹಾಗೂ ಸಮಗ್ರವಾಗಿ ನಡೆಸಬೇಕು. ಈ ಬಗ್ಗೆ ನಿರ್ಲಕ್ಷೃ ಬೇಡ ಎಂದು ಸಲಹೆ ನೀಡಿದರು.

ಪಶುವೈದ್ಯ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ. ನಟರಾಜ್, ಇಲಾಖೆ ಸಿಬ್ಬಂದಿ ಇದ್ದರು.