ನ್ಯೂಸ್

ನಿತ್ಯಭವಿಷ್ಯ: ಈ ರಾಶಿಯವರಿಂದು ಹಣಕಾಸಿನ ವ್ಯವಹಾರದಲ್ಲಿ ತುಂಬಾ ಎಚ್ಚರಿಕೆಯಿಂದಿರಿ

ಮೇಷ: ಆಹಾರ ಸೇವನೆಯಲ್ಲಿ ಕಾಳಜಿ ವಹಿಸಿ. ವ್ಯಾಪಾರಸ್ಥರಿಗೆ ಉತ್ತಮ ಲಾಭ ಬರಲಿದೆ. ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಶುಭಸಂಖ್ಯೆ: 9

ವೃಷಭ: ಜನರಿಂದ ಮೆಚ್ಚುಗೆ ಗಳಿಸುವಿರಿ. ಕೋರ್ಟ್ ವಿಚಾರಗಳಲ್ಲಿ ಸಮಸ್ಯೆಯಾಗಬಹುದು. ಅನಾರೋಗ್ಯದಿಂದ ಹೊರಬರುವಿರಿ. ಶುಭಸಂಖ್ಯೆ: 2

ಮಿಥುನ: ಕುಟುಂಬದಲ್ಲಿ ಸಂತೋಷದ ವಾತಾವರಣ. ವ್ಯವಹಾರದಲ್ಲಿ ಸಾಧಾರಣ ಸ್ಥಿತಿ. ಸಮಾರಂಭಕ್ಕೆ ಕೈಬಿಚ್ಚಿ ಖರ್ಚುಮಾಡುವಿರಿ. ಶುಭಸಂಖ್ಯೆ:7

ಕಟಕ: ವಿದೇಶಿ ವ್ಯಾಪಾರಸ್ಥರಿಗೆ ಲಾಭ. ಕೆಲಸದಲ್ಲಿ ತೊಂದರೆ ನಿವಾರಣೆ. ಮಂಗಳ ಕಾರ್ಯಕ್ಕೆ ಈ ದಿನ ಶುಭ ಸಮಯವಲ್ಲ. ಶುಭಸಂಖ್ಯೆ: 9

ಸಿಂಹ: ವಸ್ತ್ರವಿನ್ಯಾಸಕರಿಗೆ ಬೇಡಿಕೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ದೊರೆಯುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿರಲಿ. ಶುಭಸಂಖ್ಯೆ:4

ಕನ್ಯಾ: ವ್ಯಾಪಾರ ವೃದ್ಧಿಯತ್ತ ಗಮನಹರಿಸುವಿರಿ. ಕುಟುಂಬಸ್ಥರ ಜೊತೆ ಸಮಯ ಕಳೆಯುವಿರಿ. ಸಹೋದ್ಯೋಗಿಗಳಿಂದ ಸಮಸ್ಯೆ. ಶುಭಸಂಖ್ಯೆ:6

ತುಲಾ: ವ್ಯಾಪಾರದಲ್ಲಿ ಹಾನಿ, ಮಗಳ ವಿವಾಹ ಪ್ರಯತ್ನದಲ್ಲಿ ಆಶಾದಾಯಕ ಬೆಳವಣಿಗೆ. ಅನವಶ್ಯಕ ಚಿಂತೆ. ಕೌಟುಂಬಿಕ ಕಲಹ. ಶುಭಸಂಖ್ಯೆ:7

ವೃಶ್ಚಿಕ: ಸಹೋದರರಿಂದ ಧನಸಹಾಯ ಒದಗಿಬರಲಿದೆ. ಸ್ನೇಹಿತರಿಂದ ಅನುಕೂಲವಿದೆ. ಮನೋ ಧೈರ್ಯ ಅಧಿಕವಾಗುತ್ತದೆ. ಶುಭಸಂಖ್ಯೆ: 1

ಧನಸ್ಸು: ಮಿತ್ರರಿಂದ ಸಹಾಯ ದೊರೆತು ಮಾನಸಿಕ ಸಮಾಧಾನ. ಕಾರ್ಯಸಾಧನೆಯಾಗಿ ಸಂತಸ. ಅಧಿಕಾರ-ಪ್ರಾಪ್ತಿ. ಗೌರವ, ಸನ್ಮಾನ. ಶುಭಸಂಖ್ಯೆ: 8

ಮಕರ: ಭೂ ವ್ಯವಹಾರದಲ್ಲಿ ವಿವಾದ ಉಂಟಾಗಬಹುದು. ಸರ್ಕಾರಿ ಕೆಲಸಗಳಲ್ಲಿ ನಿಧಾನಗತಿ. ಸ್ನೇಹಿತರಿಂದ ಸಹಕಾರ ದೊರೆಯುವುದು. ಶುಭಸಂಖ್ಯೆ: 3

ಕುಂಭ: ಉದ್ಯೋಗವನ್ನು ಕಳೆದುಕೊಳ್ಳುವ ಭಯ. ಉದ್ಯೋಗ ಕ್ಷೇತ್ರದಲ್ಲಿ ಶುಭವಾಗುವುದು. ಆರೋಗ್ಯದಲ್ಲಿ ಸಮಸ್ಯೆ ಇರುವುದಿಲ್ಲ. ಶುಭಸಂಖ್ಯೆ:1

ಮೀನ: ವಿದೇಶ ಪ್ರವಾಸ ಮಾಡಬೇಕಾದೀತು. ಒಪ್ಪಂದಕ್ಕೆ ಸಹಿಹಾಕುವ ಸಾಧ್ಯತೆ. ಕೌಟುಂಬಿಕವಾಗಿ ಸಮಸ್ಯೆ ಎದುರಿಸಬೇಕಾಗಬಹುದು. ಶುಭಸಂಖ್ಯೆ: 4