ಮೇಷ: ಯಶಸ್ಸು ಸಿಗುವಾಗ ಎಡವುವ ಸಾಧ್ಯತೆಗಳಿವೆ. ಎಚ್ಚರ. ಆತ್ಮಾಭಿಮಾನವನ್ನು ಬೆಳೆಸಿಕೊಳ್ಳಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 5
ವೃಷಭ: ಉದ್ಯೋಗದಲ್ಲಿ ತೃಪ್ತಿ. ದುಂದು ವೆಚ್ಚ ಸಲ್ಲದು. ಭವಿಷ್ಯದ ಚಿಂತೆ ಇರಲಿ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಪ್ರಶಂಸೆ. ಶುಭಸಂಖ್ಯೆ: 1
ಮಿಥುನ: ಹಿರಿಯರ ಸಲಹೆಯ ಮೇಲೆ ವಿಶೇಷ ಯಶಸ್ಸು. ಪತ್ನಿಯೊಂದಿಗೆ ವಿರಸ. ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ. ಶುಭಸಂಖ್ಯೆ: 7
ಕಟಕ: ನಿಮ್ಮ ಶಿಫಾರಸಿನಿಂದ ದುರ್ಬಲರಿಗೆ ಸಹಾಯ. ಉಪಯುಕ್ತವಾದ ಕೆಲಸ ಮಾಡಿ. ದೂರದ ನೆಂಟರ ಆಗಮನ. ಶುಭಸಂಖ್ಯೆ: 4
ಸಿಂಹ: ಬಂಧುಗಳಲ್ಲಿ ಅಸಮಾಧಾನ. ಸಾರ್ವಜನಿಕವಾಗಿ ಸೌಜನ್ಯದಿಂದ ವರ್ತಿಸಿ. ಕುಟುಂಬದಲ್ಲಿ ರ್ಚಚಿಸಿ ನಿರ್ಧಾರ ತೆಗೆದುಕೊಳ್ಳಿ. ಶುಭಸಂಖ್ಯೆ: 5
ಕನ್ಯಾ: ನಿಮ್ಮ ಹಿರಿತನದ ಬಗ್ಗೆ ಗರ್ವ. ವಿದ್ಯಾರ್ಥಿಗಳಿಗೆ ಶುಭದಿನ. ವಿವಾಹ ಅಪೇಕ್ಷಿತರಿಗೆ ಕಾರ್ಯ ಸಿದ್ದಿಯಾಗಿ ಸಮಾಧಾನ. ಶುಭಸಂಖ್ಯೆ: 3
ತುಲಾ: ಕುಟುಂಬದಲ್ಲಿ ಮದುವೆಯ ಸಂಭ್ರಮ. ಆತ್ಮೀಯ ಸ್ನೇಹಿತನ ಭೇಟಿ. ಧಾರ್ವಿುಕ ಕ್ಷೇತ್ರಕ್ಕೆ ಪ್ರವಾಸ ತೆರಳುವ ಸಾಧ್ಯತೆ. ಶುಭಸಂಖ್ಯೆ: 4
ವೃಶ್ಚಿಕ: ಪ್ರಯತ್ನಕ್ಕೆ ಹಲವು ಅವಕಾಶ ತೆರೆದಿವೆ. ದೃಢ ನಿರ್ಧಾರ ತೆಗೆದುಕೊಳ್ಳಿ. ಅನಿರೀಕ್ಷಿತ ಧನಾಗಮ. ಪತ್ನಿಯ ಸಲಹೆ ತೆಗೆದುಕೊಳ್ಳಿ. ಶುಭಸಂಖ್ಯೆ: 5
ಧನಸ್ಸು: ನಿಮ್ಮ ಮಾತಿನಿಂದ ವಿಶೇಷ ಕಾರ್ಯಸಿದ್ಧಿ. ಬಂಧುಗಳ ಪ್ರಶಂಸೆ. ವಿಶೇಷ ಅಧಿಕಾರ-ಪ್ರಾಪ್ತಿ. ಮಕ್ಕಳಿಂದ ಚಿಂತೆ. ಶುಭಸಂಖ್ಯೆ: 9
ಮಕರ: ಆರ್ಥಿಕವಾಗಿ ಹಾನಿ ಉಂಟಾಗಬಹುದು, ಹುಷಾರು. ಭೂ ವ್ಯವಹಾರದಲ್ಲಿ ಮೋಸ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭಸಂಖ್ಯೆ: 7
ಕುಂಭ: ನಿರೀಕ್ಷಿತ ಲಾಭ ಬಂದು ಸಂತಸ. ಗುರು ಸನ್ನಿಧಾನಕ್ಕೆ ಭೇಟಿ ನೀಡುವಿರಿ. ತಂದೆತಾಯಿಗಳ ಮಾತನ್ನು ನಿರ್ಲಕ್ಷಿಸದೇ ಪಾಲಿಸಿ. ಶುಭಸಂಖ್ಯೆ: 8
ಮೀನ: ವ್ಯಾಪಾರಸ್ಥರಿಗೆ ಅಧಿಕ ಧನಲಾಭ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸಂಗೀತಗಾರರಿಗೆ ಪೋ›ತ್ಸಾಹ. ಶುಭಸಂಖ್ಯೆ: 4
(ಶ್ರೀ ದೇವದತ್ತ ಶರ್ಮಾ ಗುರೂಜಿ)