ನ್ಯೂಸ್

ಈ ರಾಶಿಯವರಿಗಿಂದು ಬೀಗರಿಂದ ಧನಾಗಮನ: ನಿತ್ಯಭವಿಷ್ಯ

ಮೇಷ: ಸ್ವಂತ ವ್ಯಾಪಾರದಲ್ಲಿ ಕೆಲಸಗಾರರ ಅಭಾವ ತಲೆದೋರುವುದು. ಬೀಗರಿಂದ ಧನಾಗಮನ. ವಾಹನದಿಂದ ಲಾಭ ಬರುವುದು. ಶುಭಸಂಖ್ಯೆ: 5

ವೃಷಭ: ಶೈಕ್ಷಣಿಕ ಕ್ಷೇತ್ರದ ಉದ್ಯೋಗದಲ್ಲಿ ನಷ್ಟ. ನ್ಯಾಯಾಲಯದಲ್ಲಿ ಜಯ ನಿಮ್ಮ ಕಡೆಗಿದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8

ಮಿಥುನ: ಉದರ ಸಂಬಂಧಿ ವ್ಯಾಧಿ ಉಲ್ಬಣ. ಬರವಣಿಗೆಯಲ್ಲಿ ಎಚ್ಚರ. ಸ್ವಯಂಕೃತ ಅಪರಾಧದಿಂದ ಬಂಧು ವರ್ಗದಲ್ಲಿ ಅವಮಾನ. ಶುಭಸಂಖ್ಯೆ: 3

ಕಟಕ: ವಾಹನದಿಂದ ಅಪಾಯ. ನಿಮ್ಮ ಆಸೆಗಳಿಂದ ಕುಟುಂಬಕ್ಕೆ ಸಂಕಷ್ಟ. ಆರೋಗ್ಯದ ಬಗ್ಗೆ ಎಚ್ಚರ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ: 4

ಸಿಂಹ: ಮಕ್ಕಳಿಗಾಗಿ ಅಧಿಕ ಖರ್ಚು ಆಗಬಹುದು. ಮನೋಭಿಲಾಷೆಗಳು ಈಡೇರುವುದು. ಮಕ್ಕಳ ವರ್ತನೆಯ ಬಗ್ಗೆ ಗಮನವಿರಲಿ. ಶುಭಸಂಖ್ಯೆ: 7

ಕನ್ಯಾ: ಸ್ನೇಹಿತರಿಂದ ನಷ್ಟ. ಅಮೂಲ್ಯ ವಸ್ತು ಕಳ್ಳತನವಾಗುವ ಸಾಧ್ಯತೆ. ಎಚ್ಚರದಿಂದಿರಿ. ಉಲ್ಲಾಸಭರಿತ ಪ್ರವಾಸ ಒದಗಿ ಬರಲಿದೆ. ಶುಭಸಂಖ್ಯೆ: 2

ತುಲಾ: ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಎಚ್ಚರ. ಮಕ್ಕಳಿಂದ ದುಃಖ. ವೀಸಾ ಸಮಸ್ಯೆ. ಕೃಷಿಕರಿಗೆ ವಿಶೇಷ ಸನ್ಮಾನ ಪ್ರಾಪ್ತಿ. ಶುಭಸಂಖ್ಯೆ: 7

ವೃಶ್ಚಿಕ: ಆಸ್ತಿ ವಿಷಯದಲ್ಲಿ ಮೋಸ. ರಹಸ್ಯ ಬಯಲು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ರಿಯಲ್ ಎಸ್ಟೇಟ್​ನವವರಿಗೆ ಶತ್ರು ಕಾಟ. ಶುಭಸಂಖ್ಯೆ: 3

ಧನುಸ್ಸು: ಆರ್ಥಿಕ ಮುಗ್ಗಟ್ಟು ತಲೆದೋರುವ ಸಾಧ್ಯತೆಯಿದೆ. ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆ. ಆಕಸ್ಮಿಕ ಅಧಿಕಾರ ಪ್ರಾಪ್ತಿಯಾಗಿ ಸಂತಸ. ಶುಭಸಂಖ್ಯೆ: 8

ಮಕರ: ಪಾಲುದಾರಿಕೆಯಿಂದ ಕೂಡಿಟ್ಟ ಹಣ ಕಳೆದುಕೊಳ್ಳುವಿರಿ. ಅನಾರೋಗ್ಯದಿಂದ ನಿದ್ರಾಭಂಗ. ಯಂತ್ರೋಪಕರಣಗಳಿಂದ ಲಾಭ. ಶುಭಸಂಖ್ಯೆ: 9

ಕುಂಭ: ಆಸ್ತಿಯ ಮೇಲೆ ಸಾಲ ಮಾಡುವ ಸಂಭವವಿದೆ. ಕಾರ್ವಿುಕರ ಕೊರತೆ ಬಗೆಹರಿಯುವುದು. ಬಾಡಿಗೆ ದಾರರಿಂದ ಸಮಸ್ಯೆಯಾದೀತು. ಶುಭಸಂಖ್ಯೆ: 5

ಮೀನ: ಮನೋಲ್ಲಾಸಕ್ಕಾಗಿ ಸಂಗಾತಿಯೊಂದಿಗೆ ಪ್ರವಾಸ. ಉದ್ಯೋಗದಲ್ಲಿ ನಿರಾಸಕ್ತಿಯಿಂದ ತೊಂದರೆ. ಮಾಟ ಮಂತ್ರದ ಭಯಬೇಡ. ಶುಭಸಂಖ್ಯೆ: 6