ಮೇಷ: ಮನೆಯ ಸದಸ್ಯರ ಬಗೆಗೂ ಅಭಿಮಾನ ಇರಲಿ. ಇದರಿಂದ ಅನೇಕ ಸಮಸ್ಯೆಗಳು ನಿವಾರಣೆಯಾಗಲಿವೆ. ಶುಭಸಂಖ್ಯೆ: 9
ವೃಷಭ: ಕಷ್ಟ ಎದುರಾದ ಪರಿಸ್ಥಿತಿಯಲ್ಲಿ ಮನೊಬಲವೇ ನಿಮ್ಮನ್ನು ದೇವರಂತೆ ರಕ್ಷಿಸಲಿದೆ. ಚಂದ್ರಗ್ರಹ ಸ್ತೋತ್ರವನ್ನು ಶ್ರದ್ಧೆಯಿಂದ ಪಠಿಸಿ. ಶುಭಸಂಖ್ಯೆ: 5
ಮಿಥುನ: ತಂದೆ-ತಾಯಿಯರ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಅವರಿಂದ ಅನೇಕ ಕಾರ್ಯವಿಧಾನಗಳ ಕುರಿತ ಹೆಚ್ಚಿನ ಮಾಹಿತಿ ಸಿಗಲಿದೆ. ಶುಭಸಂಖ್ಯೆ: 8
ಕಟಕ: ಕಾಯಕವೇ ಕೈಲಾಸ ಎಂಬ ವಚನವನ್ನು ಆದರ್ಶವಾಗಿಟ್ಟುಕೊಂಡರೆ ನಿಮಗೆ ಸಿದ್ಧಿಯ ದಾರಿಯೊಂದು ತೆರೆಯಲಿದೆ. ಶುಭಸಂಖ್ಯೆ: 2
ಸಿಂಹ: ಕಬ್ಬಿಣ, ಉಕ್ಕು, ಮರಮಟ್ಟು ವ್ಯಾಪಾರ ಮಾಡುವವರಿಗೆ ಉತ್ತಮ ಲಾಭವೇ ಇದೆ. ಒರಟು ಮಾತುಗಳನ್ನು ಬಿಡಿ. ಶುಭಸಂಖ್ಯೆ: 7
ಕನ್ಯಾ: ಎಲ್ಲರ ಎದುರು ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅನುಕಂಪ ಗಿಟ್ಟಿಸುವ ಅಭ್ಯಾಸ ಬಿಡಿ. ದತ್ತಾಷ್ಟಕ ಓದಿ. ಶುಭಸಂಖ್ಯೆ: 3
ತುಲಾ: ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇದ್ದರೂ ಸ್ನೇಹಿತರೊಂದಿಗೆ ವೈಮನಸ್ಯ ಬೇಡ. ಎಚ್ಚರದ ಹೆಜ್ಜೆ ಇಟ್ಟರೆ ಕ್ಷೇಮ. ಶುಭಸಂಖ್ಯೆ: 6
ವೃಶ್ಚಿಕ: ತಪ್ಪಿದ ದಾರಿಯಲ್ಲಿ ಬಹು ದೂರ ಸಾಗಿ ಬಂದರೂ ಹಿಂದಿರುಗಲು ಮಕ್ಕಳ ಸಹಾಯ ಸಹಕಾರ ಲಭ್ಯವಾಗಲಿದೆ. ಶುಭಸಂಖ್ಯೆ: 4
ಧನುಸ್ಸು: ನಿಗೂಢ ಉಪಾಸನೆಯ ಮೂಲಕ ಸಾತ್ವಿಕ ಶಕ್ತಿಯನ್ನು ವರ್ಧಿಸಿಕೊಳ್ಳುವಿರಿ. ಉತ್ತಮ ನಡೆಗಳಿಂದ ಜನಮನ್ನಣೆ. ಶುಭಸಂಖ್ಯೆ: 5
ಮಕರ: ಶ್ರಮಪಡದೆ ಅನಾಯಾಸವಾಗಿ ಜನಪ್ರಿಯತೆ ಗಳಿಸುವಿರಿ. ಅಧಿಕಾರಕ್ಕೆ ಏರಲು ಬೇಕಾದ ಏಣಿಯೂ ಸಿಕ್ಕೀತು. ಶುಭಸಂಖ್ಯೆ: 2
ಕುಂಭ: ಎಲ್ಲ ಪರಿಚಿತರ ಜತೆಗೂ ಅತಿಯಾದ ಸಲುಗೆ ಬೇಡ. ತೂಕಬದ್ಧ ಮಾತುಗಳು, ವೃತ್ತಿನೈಪುಣ್ಯವನ್ನು ತೋರಿಸಿ. ಶುಭಸಂಖ್ಯೆ: 9
ಮೀನ: ಹಲವರಿಗೆ ಕೆಲಸದ ಸ್ಥಳದಲ್ಲಿ ಬದಲಾವಣೆ ಇದೆ. ಭಾವುಕರಾಗದೆ ಪರಿಸ್ಥಿತಿಯನ್ನು ಎದುರಿಸಿದರೆ ಯಶಸ್ಸಿದೆ. ಶುಭಸಂಖ್ಯೆ: 1