ಮೇಷ: ನಿಮ್ಮ ಯೋಜನೆಗಳನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸುವಂಥ ಅನುಯಾಯಿಗಳಿದ್ದಾರೆ. ಯಶಸ್ಸನ್ನು ಪಡೆಯಲಿದ್ದೀರಿ. ಶುಭಸಂಖ್ಯೆ: 9
ವೃಷಭ: ಕೆಲವು ಕಾಲದಿಂದ ನಿಂತಿದ್ದ ವ್ಯವಹಾರಗಳು, ವ್ಯಾಪಾರಗಳೆಲ್ಲ ನಿಧಾನವಾಗಿ ಚೇತರಿಕೆಯನ್ನು ಕಾಣಲಿವೆ. ದುರ್ಗಾಸ್ತುತಿ ಮಾಡಿ. ಶುಭಸಂಖ್ಯೆ: 4
ಮಿಥುನ: ಅತಿಯಾದ ಸಿನಿಮಾ ವ್ಯಾಮೋಹ ಎಂದಿಗೂ ಒಳಿತನ್ನು ತರಲಾರದು. ಮನೆತನದ ಕೆಲಸಗಳನ್ನು ನಿಭಾಯಿಸಲು ಮರೆಯಬೇಡಿ. ಶುಭಸಂಖ್ಯೆ: 8
ಕಟಕ: ಗಳಿಕೆಯಲ್ಲಿ ಹರ್ಷಪಡುವಂತಹ ಚೇತರಿಕೆಯು ಕಾಣಲಿದೆ. ಆದರೆ ಧಾರಾಳತನದಿಂದ ದಾನಶೂರ ಬಿರುದು ಗಳಿಸುವ ನಿರೀಕ್ಷೆ ಬೇಡ. ಶುಭಸಂಖ್ಯೆ: 7
ಸಿಂಹ: ಕಟ್ಟಡ ವಿನ್ಯಾಸಕಾರರಿಗೆ ಹೊಸ ಅವಕಾಶಗಳು ಒದಗಿಬರಲಿವೆ. ಆದರೆ ಮಾತುಕತೆಯ ವೇಳೆ ಮಾತ್ರ ತಾಳ್ಮೆಯಿಂದ ಇರಬೇಕು. ಶುಭಸಂಖ್ಯೆ: 1
ಕನ್ಯಾ: ರಫ್ತು ವ್ಯವಹಾರಗಳು ನಿಮ್ಮ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿವೆ. ಒಮ್ಮೆಲೇ ಮೈಮರೆಯದೆ ಇದ್ದರೆ ನಿಮಗೆ ಸಿದ್ಧಿ ಲಭಿಸಲಿದೆ. ಶುಭಸಂಖ್ಯೆ: 3
ತುಲಾ: ಮಕ್ಕಳಿಂದ ಮನಸ್ಸಿಗೆ ನೋವೇ ಉಂಟಾದೀತು. ಅವರನ್ನು ಗದರಿಸಿದರೂ ಶಿಕ್ಷೆಯನ್ನು ನೀಡದಿರಿ. ಶಿವಸ್ತುತಿ ನಡೆಸುವುದು ಶುಭಕರ. ಶುಭಸಂಖ್ಯೆ: 6
ವೃಶ್ಚಿಕ: ಪ್ರಸಂಗಾವಧಾನ ತೋರುವ ಮೂಲಕ ಹಲವು ಕಠಿಣ ಸಂದರ್ಭಗಳಿಂದ ಹೊರಕ್ಕೆ ಬರಲಿದ್ದೀರಿ. ಮಹಾಗಣಪತಿಯನ್ನು ಸ್ಮರಿಸಿ. ಶುಭಸಂಖ್ಯೆ: 2
ಧನುಸ್ಸು: ಸದ್ಯದಲ್ಲಿಯೇ ನಿಮ್ಮ ಕೆಲವು ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ. ಪಂಚಮುಖಿ ಆಂಜನೇಯನ ಧ್ಯಾನ ಮಾಡಿ. ಶುಭಸಂಖ್ಯೆ: 5
ಮಕರ: ಈಗಾಗಲೇ ನಡೆಸುತ್ತಿರುವ ವ್ಯಾಪಾರದಲ್ಲಿ ಹೊಸ ವಿಭಾಗವನ್ನು ಸೇರಿಸಿದರೆ ಲಾಭವಿದೆ. ರ್ತಾಕ ಚಿಂತನೆಯೂ ಇರಲಿ. ಶುಭಸಂಖ್ಯೆ: 9
ಕುಂಭ: ಹೊಸ ಕನಸುಗಳೊಡನೆ ಕ್ರಿಯಾಶೀಲರಾಗಲು ಬಯಸುತ್ತಿದ್ದೀರಿ. ಅದಕ್ಕೆ ಬೇಕಾಗಿರುವಂಥ ಸಿದ್ಧತೆಗಳಿಗೆ ಸಕಾಲವಾಗಿದೆ. ಶುಭಸಂಖ್ಯೆ: 4
ಮೀನ: ಅಂದುಕೊಂಡಷ್ಟು ಸುಲಭವಾಗಿ ಯಾವುದೇ ವ್ಯವಹಾರಗಳೂ ಲಾಭ ನೀಡಲಾರವು. ಆದರೆ ಪರಿಶ್ರಮಕ್ಕೆ ನಷ್ಟವಾಗಲಾರದು. ಶುಭಸಂಖ್ಯೆ: 8