ನ್ಯೂಸ್

ಈ ರಾಶಿಯವರಿಗೆ ಇಂದು ಆತ್ಮೀಯ ಸ್ನೇಹಿತನ ಭೇಟಿ, ದಾಂಪತ್ಯದಲ್ಲಿ ಉಲ್ಲಾಸ: ನಿತ್ಯಭವಿಷ್ಯ

ಮೇಷ: ಬಂಧು ಮಿತ್ರರಲ್ಲಿ ವಿವಾದ. ಗೃಹೋಪಕರಣಗಳ ವ್ಯವಹಾರ ಉತ್ತಮ. ಸಾರ್ವಜನಿಕ ಜೀವನದಲ್ಲಿ ಅವಮಾನ ಸಾಧ್ಯತೆ. ಶುಭಸಂಖ್ಯೆ: 9

ವೃಷಭ: ಒತ್ತಡಗಳನ್ನು ನಿವಾರಿಸಿಕೊಂಡು ಕೆಲಸ ಮಾಡಿ. ಸಜ್ಜನರೂ ಜತೆಗೂಡುವವರು. ಆದಾಯ- ವ್ಯಯ ಸಮತೋಲನ ಸಾಧಿಸಿ. ಶುಭಸಂಖ್ಯೆ: 6

ಮಿಥುನ: ನಿರುದ್ಯೋಗಿಗಳಿಗೆ ಸತ್ವ ಪರೀಕ್ಷೆ. ಕೋರ್ಟು ವ್ಯವಹಾರಗಳು ಇತ್ಯರ್ಥವಾಗುವವು. ಹೂಡಿಕೆ ವ್ಯವಹಾರ ಕುದುರಲಿದೆ. ಶುಭಸಂಖ್ಯೆ:4

ಕಟಕ: ಸಾರ್ವಜನಿಕವಾಗಿ ಗೌರವ. ಹಣ ಹೂಡಿಕೆಯಲ್ಲಿ ಎಚ್ಚರವಿರಲಿ. ಖರೀದಿಯಲ್ಲಿ ಮೋಸ. ವೈದ್ಯರಿಗೆ ಅನುಕೂಲಕರ ವಾತಾವರಣ. ಶುಭಸಂಖ್ಯೆ:1

ಸಿಂಹ: ಮಾತು ಮಿತವಾಗಿರಲಿ. ತಾಯಿಗೆ ಅನಾರೋಗ್ಯ ಸಂಭವ. ಆಹಾರ ಸೇವಿಸುವಾಗ ಎಚ್ಚರಿಕೆ ಇರಲಿ. ಋಣಬಾಧೆ ತೀರಲಿದೆ. ಶುಭಸಂಖ್ಯೆ: 7

ಕನ್ಯಾ: ಕಾರ್ಯಒತ್ತಡದಿಂದ ಅನಾರೋಗ್ಯ. ಕಲಾವಿದರಿಗೆ ಉತ್ತಮ ಭವಿಷ್ಯ ಕಾದಿದೆ. ಸಗಟು ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 7

ತುಲಾ: ಸರ್ಕಾರಿ ಕೆಲಸಕಾರ್ಯಗಳಲ್ಲಿ ಕಿರಿಕಿರಿ. ಹಿರಿಯರ ಸಲಹೆ ತೆಗೆದುಕೊಳ್ಳಿ. ಸಂಗಾತಿಯೊಂದಿಗೆ ವೈಮನಸ್ಯ. ಆರ್ಥಿಕ ಮುಗ್ಗಟ್ಟು. ಶುಭಸಂಖ್ಯೆ:1

ವೃಶ್ಚಿಕ: ಕೃಷಿಕರಿಗೆ ಅನಾನುಕೂಲ. ರಾಜಕೀಯದವರಿಗೆ ವಿಶೇಷ ದಿನ. ಆತ್ಮೀಯ ಸ್ನೇಹಿತನ ಭೇಟಿ. ದಾಂಪತ್ಯ ಜೀವನದಲ್ಲಿ ಉಲ್ಲಾಸ. ಶುಭಸಂಖ್ಯೆ: 9

ಧನುಸ್ಸು: ಕುಟುಂಬ ಸಮಸ್ಯೆಗಳಿಗೆ ಹಿರಿಯರ ಸಲಹೆ ಪಡೆಯುವುದು ಉತ್ತಮ. ಶುಭ ಕಾರ್ಯ ವಿಳಂಬ. ಅವಿವಾಹಿತರಿಗೆ ಶುಭಸುದ್ದಿ. ಶುಭಸಂಖ್ಯೆ: 6

ಮಕರ: ಪರಿಹಾರ ದೊರೆತು ಆಸ್ತಿ ವಿವಾದಗಳಿಗೆ ಮುಕ್ತಿ. ಹಣಕಾಸಿನ ಮುಗ್ಗಟ್ಟು. ಕಿರಿಯರಿಂದ ಕಿರಿಕಿರಿ. ಗಾಯಕರಿಗೆ ವಿಶೇಷ ದಿನ. ಶುಭಸಂಖ್ಯೆ: 4

ಕುಂಭ: ವಿದ್ಯಾರ್ಥಿಗಳಿಗೆ ಚೈತನ್ಯದಾಯಕ ದಿನ. ಮಾನಸಿಕ ಒತ್ತಡ. ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ತೊಂದರೆ. ಶುಭಸಂಖ್ಯೆ: 6

ಮೀನ: ಗೃಹ ಆರಂಭಕ್ಕೆ ಸಿದ್ಧತೆ. ನಿವೇಶನ ಖರೀದಿಗೆ ನಿರ್ಧಾರ. ಮಗಳ ಮದುವೆ ಕುರಿತು ಚರ್ಚೆ. ದಿನಾಂತ್ಯದಲ್ಲಿ ಅನಾರೋಗ್ಯ. ಶುಭಸಂಖ್ಯೆ: 6