ನ್ಯೂಸ್

ಈ ರಾಶಿಯವರಿಗಿಂದು ಸಂಗಾತಿಯಿಂದ ಸಾಂತ್ವನ: ನಿತ್ಯಭವಿಷ್ಯ

ಮೇಷ: ದಿನಸಿ ವ್ಯಾಪಾರಿಗಳಿಗೆ ಧನಾಗಮನ ಸಾಧ್ಯತೆ. ಮಕ್ಕಳಿಂದ ಶುಭಸಮಾಚಾರ ಕೇಳಲಿದ್ದೀರಿ. ಉತ್ತಮ ಆರೋಗ್ಯ ಹೊಂದುವಿರಿ. ಶುಭಸಂಖ್ಯೆ: 9

ವೃಷಭ: ಪರಿಶ್ರಮಕ್ಕೆ ತಕ್ಕುದಾದ ಮನ್ನಣೆ. ಸ್ಥಗಿತವಾಗಿದ್ದ ಯೋಜನೆಗಳು ಪುನಃ ಚಾಲನೆ ಪಡೆದುಕೊಳ್ಳಲಿವೆ. ಕುಟುಂಬದಲ್ಲಿ ಸಂತಸ. ಶುಭಸಂಖ್ಯೆ: 5

ಮಿಥುನ: ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ. ನೆನೆದ ಕಾರ್ಯಗಳು ಸಿದ್ಧಿ. ವಾಹನ ಚಾಲನೆಯಲ್ಲಿ ಅಪಘಾತದ ಬಗ್ಗೆ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ: 7

ಕಟಕ: ಅಪವಾದದಿಂದ ಪಾರಾಗಲಿದ್ದೀರಿ. ಪ್ರಯಾಣವು ಶುಭಕರವಾಗಿ ಪರಿಣಮಿಸಲಿದೆ. ಮಕ್ಕಳ ಬಗ್ಗೆ ಸ್ವಲ್ಪಮಟ್ಟಿನ ಕಾಳಜಿ ಅಗತ್ಯ. ಶುಭಸಂಖ್ಯೆ: 3

ಸಿಂಹ: ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ವಿನಾಕಾರಣ ಅಧಿಕ ಖರ್ಚು ಸಂಭವಿಸುವ ಸಾಧ್ಯತೆ ಇದೆ. ಶುಭಸಂಖ್ಯೆ: 7

ಕನ್ಯಾ: ಕೆಲಸದಲ್ಲಿ ಕಿರಿಕಿರಿ. ಯಾರಮೇಲೂ ಅತಿ ನಂಬಿಕೆ ಸಲ್ಲದು. ಮನೆ ಮಂದಿಯೊಂದಿಗೆ ದೂರದ ಬಂಧುಗಳ ದರ್ಶನ ಯೋಗ. ಶುಭಸಂಖ್ಯೆ: 7

ತುಲಾ: ಬರಹಗಾರರಿಗೆ ಶುಭ ದಿನ. ಅತಿ ಕಾರ್ಯಬಾಹುಳ್ಯ ದಿಂದಾಗಿ ಮಾನಸಿಕ ಗೊಂದಲ. ಆಯ್ಕೆಯ ಮೂಲಕ ಕಾರ್ಯ ಕೈಗೆತ್ತಿಕೊಳ್ಳಿ. ಶುಭಸಂಖ್ಯೆ: 1

ವೃಶ್ಚಿಕ: ಹೊಸ ಯೋಜನೆ ಕುರಿತು ಗುರುಹಿರಿಯರ ಸಲಹೆ ಪಡೆದುಕೊಳ್ಳುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿಶೇಷ ವೆಚ್ಚ. ಶುಭಸಂಖ್ಯೆ: 6

ಧನುಸ್ಸು: ಸರ್ಕಾರಿ ಕಚೇರಿಗೆ ಸಂಬಂಧಿಸಿದ ಕೆಲಸಕಾರ್ಯಗಳು ಯಶಸ್ವಿ. ಅನಾರೋಗ್ಯ ಪೀಡಿತರ ಆರೋಗ್ಯದಲ್ಲಿ ಪ್ರಗತಿ. ನೆಮ್ಮದಿ. ಶುಭಸಂಖ್ಯೆ: 4

ಮಕರ: ಬಿಡುವಿಲ್ಲದ ಕೆಲಸ ಕಾರ್ಯಗಳು. ಉಪನ್ಯಾಸಕ ವೃತ್ತಿಯಲ್ಲಿರುವವರಿಗೆ ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ. ಶುಭಸಂಖ್ಯೆ: 8

ಕುಂಭ: ಮನೆಯ ನಿರ್ಮಾಣ ಮತ್ತಿತರ ಕೆಲಸಗಳಲ್ಲಿ ಪ್ರಗತಿ. ವಾಹನ ಖರೀದಿಗೆ ಪ್ರಶಸ್ತ ದಿನ. ಪಾಲುದಾರಿಕೆಯಲ್ಲಿ ಸ್ವಲ್ಪಮಟ್ಟಿನ ಬಿರುಕು. ಶುಭಸಂಖ್ಯೆ: 5

ಮೀನ: ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯಾದರೂ ಸಹೋದ್ಯೋಗಿಗಳ ಸಹಕಾರದಿಂದ ನೆಮ್ಮದಿ. ಸಂಗಾತಿಯಿಂದ ಸಾಂತ್ವನ. ಶುಭಸಂಖ್ಯೆ: 9