ನ್ಯೂಸ್

ನಿತ್ಯಭವಿಷ್ಯ| ಈ ರಾಶಿಯವರಿಗೆ ಹಳೆಯ ಕಾಯಿಲೆ ಕಾಡುವ ಸಾಧ್ಯತೆಯಿದೆ..

ಮೇಷ: ಎಲ್ಲ ಸಂದರ್ಭಗಳಲ್ಲಿಯೂ ಸ್ನೇಹಿತರು ನೆರವಿಗೆ ಬರಲಾರರು. ನಿಮಗೆ ನೀವೇ ಸ್ನೇಹಿತರಾಗಿ ಜಯವನ್ನು ಗಳಿಸಿ. ಶುಭಸಂಖ್ಯೆ: 8

ವೃಷಭ: ಸುಂಟರಗಾಳಿಯ ದಿಕ್ಕನ್ನು ತಿರುಗಿಸುವಂತಹ ವ್ಯರ್ಥ ಯತ್ನ ಮಾಡುತ್ತಿದ್ದೀರಿ. ಹಾಗೆ ಮಾಡದೆ ತೊಂದರೆಯನ್ನು ತಪ್ಪಿಸಿಕೊಳ್ಳಿ. ಶುಭಸಂಖ್ಯೆ: 3

ಮಿಥುನ: ಬೆನ್ನ ಹಿಂದೆ ಟೀಕಿಸುವಂಥ ಜನರು ಸಾಕಷ್ಟಿದ್ದರೂ ಬೇಸರಪಡದಿರಿ. ಅದರಿಂದ ಯಾರನ್ನು ಕೂಡ ಬದಲಾಯಿಸಲು ಸಾಧ್ಯವಾಗದು. ಶುಭಸಂಖ್ಯೆ: 1

ಕಟಕ: ದೂರದ ಬಂಧುಗಳಿಂದ ಕಿರಿಕಿರಿ ಉಂಟಾದರೂ ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಒಳಿತಿನ ಪಥವನ್ನು ಕಂಡುಕೊಳ್ಳಲಿದ್ದೀರಿ. ಶುಭಸಂಖ್ಯೆ: 9

ಸಿಂಹ: ವ್ಯಾಪಾರ ವಹಿವಾಟುಗಳೆಲ್ಲ ಏಕಾಏಕಿಯಾಗಿ ಕುಸಿಯಬಹುದು. ರ್ತಾಕವಾಗಿ ಆಲೋಚಿಸಿ ಮುನ್ನಡೆದರೆ ಬೇಗನೆ ಗೆಲ್ಲುವಿರಿ. ಶುಭಸಂಖ್ಯೆ: 7

ಕನ್ಯಾ: ಲಾಟರಿಯಂಥ ಅದೃಷ್ಟದ ಆಟಗಳು ತೊಂದರೆಗೆ ತಳ್ಳಬಹುದು. ಯಾವುದೇ ಅನುಮಾನವನ್ನೂ ಇಟ್ಟುಕೊಳ್ಳದೆ ಬಿಟ್ಟರೆ ಯುಕ್ತ. ಶುಭಸಂಖ್ಯೆ: 4

ತುಲಾ: ನಂಬಿಸಿ ಮೋಸ ಮಾಡುವಂತಹ ಜನರ ಬಗ್ಗೆ ಜಾಗ್ರತೆಯನ್ನು ವಹಿಸಿ. ಅಮಾಯಕತೆಯಿಂದ ಅಪಾಯ ಎದುರಾಗಬಹುದು. ಶುಭಸಂಖ್ಯೆ: 2

ವೃಶ್ಚಿಕ: ಆರೋಗ್ಯದ ಕಡೆಗೆ ಸ್ವಲ್ಪ ಗಮನ ಕೊಡುವುದು ಉತ್ತಮ. ಇಲ್ಲವಾದರೆ ಹಳೆಯ ತೊಂದರೆಯೇ ಮರುಕಳಿಸುವ ಸಾಧ್ಯತೆಯಿದೆ. ಶುಭಸಂಖ್ಯೆ: 6

ಧನಸ್ಸು: ನೀರಿಗೆ ಸಂಬಂಧಿಸಿದ ವಿಚಾರದಲ್ಲಿ ವಿವಾದಕ್ಕೆ ಸಿಲುಕುವಂತಹ ಸಾಧ್ಯತೆ ಕಾಣಿಸುತ್ತಿದೆ. ತಾಯಿ ಕಾವೇರಿಯ ಸ್ಮರಣೆಯೇ ಸೂಕ್ತ. ಶುಭಸಂಖ್ಯೆ: 5

ಮಕರ: ರಾಜಕೀಯ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಹಿತಶತ್ರುಗಳನ್ನೂ ನಿಯಂತ್ರಿಸಬೇಕಾದೀತು. ಚಾತುರ್ಯದಿಂದಲೇ ನಿಭಾಯಿಸಿ. ಶುಭಸಂಖ್ಯೆ: 3

ಕುಂಭ: ತಾಳ್ಮೆ ಹಾಗೂ ಕಾರ್ಯಶೀಲತೆಗಳಿಂದ ಉದ್ಯೋಗದ ಸ್ಥಳದಲ್ಲಿ ಕೀರ್ತಿಗೆ ಭಾಜನರಾಗುವಿರಿ. ಭಕ್ತಿಯಿಂದ ಕುಲದೇವತೆಯನ್ನು ಧ್ಯಾನಿಸಿ. ಶುಭಸಂಖ್ಯೆ: 8

ಮೀನ : ಮಾಂತ್ರಿಕ ವಿದ್ಯೆಯ ಹೆಸರಿನಲ್ಲಿ ಮಂಕುಬೂದಿ ಎರಚುವಂತಹ ಜನರು ಸಿಗಬಹುದು. ಅಂಥವರ ಬಗೆಗೆ ಹೆಚ್ಚಿನ ಜಾಗ್ರತೆ ಇದ್ದಿರಲಿ. ಶುಭಸಂಖ್ಯೆ: 1