ಮೇಷ: ಸುಲಭವಾಗಿ ಬಗೆಹರಿಯುವ ವಿಷಯಗಳಿಗೆ ಗೋಜಲು ಮಾಡಿಕೊಳ್ಳಬೇಡಿ. ಸಂಧಾನದಿಂದ ಸಮಸ್ಯೆ ಬಗೆಹರಿಯುತ್ತವೆ. ಶುಭಸಂಖ್ಯೆ: 9
ವೃಷಭ: ಆತ್ಮೀಯರೊಂದಿಗೆ ಸಮಾಲೋಚನೆ ಮಾಡುವಿರಿ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಬೈಗುಳ ಅನುಭವಿಸಬೇಕಾದೀತು. ಶುಭಸಂಖ್ಯೆ: 5
ಮಿಥುನ: ತಾಳ್ಮೆಯಿಂದ ವರ್ತಿಸಿ. ಕುಟುಂಬ ಸದಸ್ಯರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಿ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 2
ಕಟಕ: ಆಲಸ್ಯದಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಅನ್ನೋ ಪರಿಸ್ಥಿತಿ. ಬಹು ದಿನದಿಂದ ನಿರೀಕ್ಷಿಸಿದ ಗೃಹನಿರ್ವಣ ಕೆಲಸಕ್ಕೆ ಚಿಂತನೆ. ಶುಭಸಂಖ್ಯೆ: 9
ಸಿಂಹ: ಹಿತಶತ್ರುಗಳಿಂದ ಅಸಮಾಧಾನ. ತಂದೆ-ತಾಯಿಯ ಸಲಹೆಯನ್ನು ಸ್ವೀಕರಿಸಿ. ವೈದ್ಯರ ಸಲಹೆಯನ್ನು ನಿರ್ಲಕ್ಷಿಸಬೇಡಿ. ಶುಭಸಂಖ್ಯೆ: 7
ಕನ್ಯಾ: ಹಲವು ದಿನಗಳಿಂದ ಇದ್ದ ವಿವಾದ ಇತ್ಯರ್ಥವಾಗಲಿದೆ. ಕುಟುಂಬ ವರ್ಗದವರ ಭೇಟಿ. ಮಕ್ಕಳೊಂದಿಗೆ ಸಮಯ ಕಳೆಯಿರಿ. ಶುಭಸಂಖ್ಯೆ: 7
ತುಲಾ: ಸಾರ್ವಜನಿಕ ಕ್ಷೇತ್ರದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ವಾಹನ ಚಾಲನೆಯಲ್ಲಿ ಎಚ್ಚರಿಕೆಯಿಂದಿರಿ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 7
ವೃಶ್ಚಿಕ: ಬಂಧುಗಳ ಆಗಮನ. ಕುಟುಂಬದೊಂದಿಗೆ ಸಂತಸದ ಕ್ಷಣಗಳು. ಪತ್ನಿಯೊಂದಿಗೆ ಘರ್ಷಣೆ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 1
ಧನುಸ್ಸು: ಇಂದು ಸಿಕ್ಕಿದ ಜಯದಲ್ಲಿ ಮೈ ಮರೆಯಬೇಡಿ. ಶತ್ರುಗಳನ್ನು ಹಗುರವಾಗಿ ಭಾವಿಸಬೇಡಿ. ಕುಟುಂಬದ ವಿವಾದ ಸುಖಾಂತ್ಯ. ಶುಭಸಂಖ್ಯೆ: 6
ಮಕರ: ನಿಮ್ಮ ನೂತನ ಯೋಜನೆಗಳಿಗೆ ಕುಟುಂಬದ ಬೆಂಬಲ ಪಡೆಯಿರಿ. ಪತ್ನಿ-ಮಕ್ಕಳೊಂದಿಗೆ ಸಂತಸದಿಂದ ಇರಲು ಪ್ರಯತ್ನಿಸಿ. ಶುಭಸಂಖ್ಯೆ: 8
ಕುಂಭ: ಕಾರ್ಯಸಿದ್ದಿಯಲ್ಲಿ ಪ್ರತಿರೋಧಗಳು ಬರಬಹುದು. ಗಣಪತಿಯನ್ನು ಪೂಜಿಸಿ. ಆರೋಗ್ಯದ ಕಡೆ ನಿಗಾ ಇರಲಿ. ಧನವ್ಯಯ. ಶುಭಸಂಖ್ಯೆ: 4
ಮೀನ: ಕನಸು ನನಸಾಗುವ ಸುದಿನ. ವಿವಾಹದ ವಿಷಯದಲ್ಲಿ ನಿಮ್ಮದೇ ಅಂತಿಮ ತೀರ್ಮಾನ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 5