ನ್ಯೂಸ್

ನಿತ್ಯಭವಿಷ್ಯ| ಈ ರಾಶಿಯವರಿಗಿಂದು ದಿನಾಂತ್ಯಕ್ಕೆ ಶುಭವಾರ್ತೆ ಕೇಳಲಿದ್ದಾರೆ

ಮೇಷ: ಮನಸ್ಸಿಗೆ ಆಹ್ಲಾದಕರ ಎನಿಸುವ ಘಟನೆಗಳು. ಮನೆಯಲ್ಲಿ ಶುಭ ಕೆಲಸಕ್ಕೆ ಚಾಲನೆ. ವ್ಯಾಪಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 9

ವೃಷಭ: ಸಾಂಸ್ಕೃತಿಕ ಸ್ಪಂದನೆ. ಬಡವರಿಗೆ ಸಹಾಯ ಮಾಡಿ. ಗುರು ಸನ್ನಿಧಿಗೆ ಭೇಟಿ. ಮದುವೆೆ ನಿರೀಕ್ಷೆಯಲ್ಲಿದ್ದವರಿಗೆ ಕಾರ್ಯಸಿದ್ಧಿ. ಶುಭಸಂಖ್ಯೆ: 7

ಮಿಥುನ: ಬಂಧುಗಳೊಂದಿಗೆ ಸಂತೋಷಕೂಟ. ನನೆಗುದಿಗೆ ಬಿದ್ದ ಗೃಹ ನಿರ್ಮಾಣ ಕೆಲಸಕ್ಕೆ ಚಾಲನೆ. ಆತ್ಮೀಯರ ಸಲಹೆ ಪಡೆಯಿರಿ. ಶುಭಸಂಖ್ಯೆ:2

ಕಟಕ: ಆತ್ಮವಿಶ್ವಾಸಕ್ಕೆ ಧಕ್ಕೆ ತರುವಂತಹ ಘಟನೆ. ತಾಳ್ಮೆಯಿರಲಿ. ಹತ್ತಿರದ ಬಂಧುಗಳ ಆಗಮನ. ಶುಭ ಸಮಾರಂಭದಲ್ಲಿ ಭಾಗಿ. ಶುಭಸಂಖ್ಯೆ: 8

ಸಿಂಹ: ದೊಡ್ಡಮೊತ್ತದ ಧನ ನಷ್ಟ. ಗೃಹ ನಿರ್ವಣಕ್ಕೆ ಕುಟುಂಬದೊಂದಿಗೆ ಮಾತುಕತೆ. ಆತ್ಮೀಯ ಸ್ನೇಹಿತನ ಆಗಮನ. ಶುಭಸಂಖ್ಯೆ: 4

ಕನ್ಯಾ: ಸ್ವಂತ ಉದ್ಯೋಗ ಮಾಡುವವರಿಗೆ ವಿಶೇಷ ದಿನ. ಗಾಯಕರಿಗೆ ವಿಶೇಷ ಧನಲಾಭ. ಹಳೆಯ ಗೆಳೆಯನ ಭೇಟಿ. ಶುಭಸಂಖ್ಯೆ: 4

ತುಲಾ: ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಸಂಗಾತಿಯ ಸಲಹೆಯನ್ನು ಪರಿಗಣಿಸಿ. ಸಹೋದರರೊಂದಿಗೆ ವಾಗ್ವಾದ. ಶುಭಸಂಖ್ಯೆ: 7

ವೃಶ್ಚಿಕ: ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಹಿರಿಯರ ಮಾರ್ಗದರ್ಶನ ತೆಗೆದುಕೊಳ್ಳಿ. ಕೃಷಿಕರಿಗೆ ವಿಶೇಷ. ಪ್ರತಿಭಾನ್ವಿತರಿಗೆ ಉತ್ತಮ ಅವಕಾಶ. ಶುಭಸಂಖ್ಯೆ: 5

ಧನುಸ್ಸು: ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣದ ಕೊರತೆ ಕಾಡಬಹುದು. ವ್ಯಾಪಾರದಲ್ಲಿ ಅಧಿಕ ನಷ್ಟ. ದಿನಾಂತ್ಯಕ್ಕೆ ಶುಭವಾರ್ತೆ. ಶುಭಸಂಖ್ಯೆ: 6

ಮಕರ: ಮಾತಿನಿಂದ ಶತ್ರುಗಳು ಸೃಷ್ಟಿಯಾಗಬಹುದು. ಸಾರ್ವಜನಿಕ ರಂಗದವರಿಗೆ ವಿಶೇಷ ಮನ್ನಣೆ. ಬಂಧುಗಳ ಮನೆಗೆ ಭೇಟಿ. ಶುಭಸಂಖ್ಯೆ: 4

ಕುಂಭ: ಕೂಡಿಟ್ಟ ಹಣದ ಅಪವ್ಯಯ. ಮಕ್ಕಳ ಭವಿಷ್ಯದ ಚಿಂತೆ ಕಾಡಬಹುದು. ಧಾರ್ವಿುಕ ಕ್ಷೇತ್ರಕ್ಕೆ ಭೇಟಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 5

ಮೀನ: ನಿರೀಕ್ಷೆಯಲ್ಲಿದ್ದ ಕೆಲಸದ ಪ್ರಗತಿ. ಸ್ವಗ್ರಾಮದಿಂದ ಬಂಧುಗಳ ಆಗಮನ. ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 3