ನ್ಯೂಸ್

ನಿತ್ಯ ಭವಿಷ್ಯ: ಈ ರಾಶಿಯವರು ಅವಿವಾಹಿತರಿಗೆ ವಿವಾಹಭಾಗ್ಯ, ಸಂತಾನಾಪೇಕ್ಷಿಗಳಿಗೂ ಸಿಹಿ ಸಮಾಚಾರ

ಮೇಷ: ಸುಲಭವಾಗಿ ಲಭಿಸುವ ವಿಚಾರ ಅಥವಾ ವಸ್ತುವಿಗಾಗಿ ಹೋರಾಟ ನಡೆಸುತ್ತೀರಿ, ಅನಗತ್ಯ ಶ್ರಮಪಡುವಿರಿ. ಅದೃಷ್ಟಸಂಖ್ಯೆ: 9

ವೃಷಭ: ಪರೀಕ್ಷೆ ಎದುರಾಗುವ ಸಂದರ್ಭ ಇದ್ದಲ್ಲಿ ಉತ್ತಮ ಯಶಸ್ಸು ಇದೆ. ಇಲ್ಲವಾದಲ್ಲಿ ಹೊಸದನ್ನು ಕಲಿಯುವಿರಿ. ಅದೃಷ್ಟಸಂಖ್ಯೆ: 4

ಮಿಥುನ: ಕೆಲವರ ಅಹಂಕಾರದಿಂದಾಗಿ ನಿಮಗೆ ಸಿಗಬಹುದಾದ ಕೆಲವು ಉತ್ತಮ ಅವಕಾಶಗಳು ಕೈತಪ್ಪಿಹೋಗಬಹುದು. ಅದೃಷ್ಟಸಂಖ್ಯೆ: 3

ಕಟಕ: ಈ ಹಿಂದೆ ಇದ್ದ ಉದ್ವೇಗ, ಮನಸ್ತಾಪ, ಮಾನಸಿಕ ಚಿಂತೆಗಳು ಕಡಿಮೆಯಾಗಿ ಸಂತೋಷಪಡಲಿದ್ದೀರಿ. ಅದೃಷ್ಟಸಂಖ್ಯೆ: 5

ಸಿಂಹ: ದುಡ್ಡು ಪಡೆದು ಕೆಲಸ ಮಾಡಿಕೊಡುವವರೇ ಹಾಗೆ ಮಾಡದೆ ಸುಮ್ಮನಿರುತ್ತಾರೆ. ನೀವು ಅಶಕ್ತರೆನಿಸಬಹುದು. ಅದೃಷ್ಟಸಂಖ್ಯೆ: 1

ಕನ್ಯಾ: ಆಭರಣ, ವಸ್ತ್ರ ಖರೀದಿ ಯೋಗವಿದೆ. ಕೆಲವು ವಿಚಾರ, ಪರಿಸ್ಥಿತಿಗಳನ್ನು ಜಾಣ್ಮೆಯಿಂದ ತಪ್ಪಿಸಿಕೊಳ್ಳಲಿದ್ದೀರಿ. ಅದೃಷ್ಟಸಂಖ್ಯೆ: 7

ತುಲಾ: ಶತ್ರುಗಳು ನಿಮಗೆ ತಿಳಿದಿಲ್ಲದ ವಿಚಾರದಲ್ಲಿ ಅವಮಾನಿಸಲು ಸಜ್ಜಾಗಿದ್ದಾರೆ. ಅವರನ್ನು ಧೈರ್ಯದಿಂದ ಎದುರಿಸಿ. ಅದೃಷ್ಟಸಂಖ್ಯೆ: 6

ವೃಶ್ಚಿಕ: ಬಗೆಹರಿಸಿಕೊಳ್ಳಲು ಹೋದ ಚಿಕ್ಕ ಸಮಸ್ಯೆ ನಿಮಗರಿವಿಲ್ಲದೆ ದೊಡ್ಡದಾಗುವ ಸಾಧ್ಯತೆ ಇದೆ. ಎಚ್ಚರವಿರಲಿ. ಅದೃಷ್ಟಸಂಖ್ಯೆ: 5

ಧನಸ್ಸು: ಅವಿವಾಹಿತರಿಗೆ ವಿವಾಹಭಾಗ್ಯ ಹಾಗೂ ಸಂತಾನಾಪೇಕ್ಷಿಗಳಿಗೂ ಸಿಹಿ ಸಮಾಚಾರವನ್ನು ಕೇಳುವ ಯೋಗವಿದೆ. ಅದೃಷ್ಟಸಂಖ್ಯೆ: 2

ಮಕರ: ವ್ಯಾಪಾರಿಗಳಿಗೆ ಉತ್ತಮ ಸಂದರ್ಭ. ಆದರೆ ಲಾಭದ ಆಸೆಗೆ ಬಿದ್ದು ಸಾಲ ನೀಡಿದರೆ ಮಾತ್ರ ನಷ್ಟವಾದೀತು. ಅದೃಷ್ಟಸಂಖ್ಯೆ: 5

ಕುಂಭ: ನೀವು ಮಾಡಿದ ಅಥವಾ ಮಾಡಲಿರುವ ಜಗಳ ನಿಮ್ಮ ಯೋಗ್ಯತೆಯನ್ನು ಹರಾಜು ಹಾಕಬಹುದು. ಎಚ್ಚರ. ಅದೃಷ್ಟಸಂಖ್ಯೆ: 9

ಮೀನ: ಯಾವುದು ಕೂಡ ಸುಲಭವಾದುದಲ್ಲ. ಪ್ರತಿಯೊಂದಕ್ಕೂ ಕಷ್ಟಪಡಲೇಬೇಕು ಎನ್ನುವ ಸತ್ಯದ ಅರಿವಾಗುತ್ತದೆ. ಅದೃಷ್ಟಸಂಖ್ಯೆ: 1