ಮೇಷ: ಸಂಬಂಧಕ್ಕೆ ಸಂಬಂಧಿಸಿ ವ್ಯವಹಾರಗಳು
ಯಶಸ್ಸಿನತ್ತ ಒಯ್ಯಬಹುದು. ಆದರೆ ಬುದ್ಧಿಬಲ
ನೈತಿಕತೆಯಿಂದಿರಲಿ. ಶುಭಸಂಖ್ಯೆ: 9
ವೃಷಭ: ಯಾರನ್ನೂ ನಂಬುವುದು, ನಂಬದಿರುವುದು
ಮುಖ್ಯವಲ್ಲ. ಸದ್ಯದ ವ್ಯವಹಾರದಲ್ಲಿ ಕರ್ತೃತ್ವ
ಶಕ್ತಿ ಮುಖ್ಯವಾಗಲಿ. ಶುಭಸಂಖ್ಯೆ: 1
ಮಿಥುನ: ಉದ್ಯೋಗದ ಸ್ಥಳದಲ್ಲಿ ವಿಶೇಷ
ಸೌಲಭ್ಯಗಳನ್ನು ಪಡೆಯಲಿದ್ದೀರಿ. ನಿಮ್ಮ
ಚೈತನ್ಯದಿಂದ ಗೆಲುವಿನ ತಿರುವು ಲಭ್ಯ. ಶುಭಸಂಖ್ಯೆ: 4
ಕಟಕ: ಕುಟುಂಬದಲ್ಲಿ ಅಸಂತೃಪ್ತಿ ಅನುಭವಿಸುತ್ತಿದ್ದೀರಿ.
ಅದು ಕ್ಷೀಣಿಸಲು ಮುಖ್ಯವಾಗಿ ಮಾತಿನ
ಆರ್ಭಟ ತೊರೆಯಿರಿ. ಶುಭಸಂಖ್ಯೆ: 7
ಸಿಂಹ: ಒಡವೆ, ವಜ್ರಾಭರಣಗಳ ಮನಸೋ
ಇಚ್ಛೆ ಖರೀದಿ ಬೇಡ. ಉಳಿತಾಯದಿಂದ
ಮಾತ್ರವೇ ನಿಮಗೆ ಒಳಿತಾಗಲಿದೆ. ಶುಭಸಂಖ್ಯೆ: 3
ಕನ್ಯಾ: ದಿವ್ಯ ಶಕ್ತಿಯೊಂದು ನಿಮ್ಮನ್ನು ಸತ್ಕಾರ್ಯಗಳಿಗೆ
ಉತ್ತೇಜಿಸುವ ಮೂಲಕ ಉತ್ತಮ ಲಾಭಕ್ಕೆ
ದಾರಿ ತೋರಿಸುತ್ತದೆ. ಶುಭಸಂಖ್ಯೆ: 6
ತುಲಾ: ಏನೇ ಮಾಡಿದರೂ ನಿಭಾಯಿಸಬಹುದು
ಎಂಬ ಅತಿಯಾದ ಆತ್ಮವಿಶ್ವಾಸ ಬಿಡಿ.
ತಾಳ್ಮೆಗೆ ಹೆಚ್ಚು ಅವಕಾಶ ಇರಲಿ. ಶುಭಸಂಖ್ಯೆ: 2
ವೃಶ್ಚಿಕ: ಅಪೂರ್ವ ಆಲೋಚನಾಶಕ್ತಿಯನ್ನು
ಹೊಂದಿದ್ದೀರಿ. ಆದರೆ ಅವಸರದಿಂದ ನಿಮ್ಮನ್ನು
ನೀವು ಕಾಪಾಡಿಕೊಳ್ಳಬೇಕು. ಶುಭಸಂಖ್ಯೆ: 8
ಧನುಸ್ಸು: ಅಪರಿಚಿತರಿಂದ ಕಿರಿಕಿರಿ ಎದುರಾಗಬಹುದು.
ಧೈರ್ಯದಿಂದ ಎದುರಿಸಲು ಮನಸ್ಸನ್ನು
ಸಜ್ಜುಗೊಳಿಸಿದರೆ ಶುಭ. ಶುಭಸಂಖ್ಯೆ: 5
ಮಕರ: ವ್ಯಾಪಾರದ ಪಾಲುದಾರರ ಆಯ್ಕೆಯಲ್ಲಿ
ಜಾಣ್ಮೆಯಿರಲಿ. ಏಕೆಂದರೆ ಯಾವಾಗಲೂ
ಹಣವಷ್ಟೇ ಮುಖ್ಯವಾಗದು. ಶುಭಸಂಖ್ಯೆ: 9
ಕುಂಭ: ಧೈರ್ಯದಿಂದ ಮುನ್ನುಗ್ಗುವ ಪ್ರಯತ್ನ
ಮಾಡಿ. ನಿಮ್ಮ ಕ್ರಿಯಾಶೀಲತೆಗೆ ಮನೆಯ
ಸದಸ್ಯರಿಂದ ಬೆಂಬಲ ಸಿಗಲಿದೆ. ಶುಭಸಂಖ್ಯೆ: 4
ಮೀನ : ದೂರಪ್ರವಾಸ ಮಾಡುವ ಸಂದರ್ಭವಿದ್ದರೆ
ಕಾರ್ಯಚಟುವಟಿಕೆಗಳ ರೂಪುರೇಷೆ
ಸಿದ್ಧಪಡಿಸಿಕೊಂಡರೆ ಲಾಭವಿದೆ. ಶುಭಸಂಖ್ಯೆ: 1