ನ್ಯೂಸ್

ಈ ರಾಶಿಯವರು ಇಂದು ವ್ಯಾಪಾರಕ್ಕೆ ಬಂಡವಾಳ ತೊಡಗಿಸುವಾಗ ಎಚ್ಚರ: ನಿತ್ಯಭವಿಷ್ಯ

ಮೇಷ: ಸ್ನೇಹಿತರ ಜತೆ ಚೇತೋಹಾರಿ ಕ್ಷಣ. ನ್ಯಾಯಾಲಯದ ಪ್ರಕರಣದಲ್ಲಿ ಜಯ. ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ. ಶುಭಸಂಖ್ಯೆ: 2

ವೃಷಭ: ದೇಹದ ಬಗ್ಗೆ ಕಾಳಜಿ ವಹಿಸಿ. ವೈದ್ಯರ ಸಲಹೆ ಪಾಲಿಸಿ. ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ. ಸಾರ್ವಜನಿಕ ರಂಗದಲ್ಲಿ ಸನ್ಮಾನ. ಶುಭಸಂಖ್ಯೆ: 8

ಮಿಥುನ: ಪ್ರಮುಖ ನಿರ್ಧಾರದಲ್ಲಿ ಗೊಂದಲ. ಕಚೇರಿಯಲ್ಲಿ ಉದ್ವೇಗದಿಂದ ವರ್ತಿಸಬೇಡಿ. ಹಿತಶತ್ರುಗಳಿಂದ ನಿಮ್ಮ ಬಗ್ಗೆ ಅಪಪ್ರಚಾರ. ಶುಭಸಂಖ್ಯೆ: 1

ಕಟಕ: ಹೃದಯ ಸಂಬಂಧಿ ತೊಂದರೆ ಉಲ್ಬಣಗೊಳ್ಳ ಬಹುದು. ಸಣ್ಣಪುಟ್ಟದ್ದಕ್ಕೂ ಕೋಪಿಸಿಕೊಳ್ಳಬೇಡಿ. ಮಗಳ ಮದುವೆ ನಿಶ್ಚಯ. ಶುಭಸಂಖ್ಯೆ:8

ಸಿಂಹ: ಧಾರ್ವಿುಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಅಪವ್ಯಯದ ಬಗ್ಗೆ ನಿಗಾ ಇರಲಿ. ಹಲವು ದಿನಗಳ ಆರ್ಥಿಕ ವ್ಯವಹಾರಕ್ಕೆ ಮುಕ್ತಿ್ತ ಶುಭಸಂಖ್ಯೆ: 3

ಕನ್ಯಾ: ಸುತ್ತಮುತ್ತಲಿನ ವಾತಾವರಣ ಧೈರ್ಯವನ್ನು ಹೆಚ್ಚಿಸುತ್ತದೆ. ಷೇರು ವ್ಯವಹಾರದಲ್ಲಿ ನಷ್ಟ. ಮಕ್ಕಳಿಗೆ ಮಾರ್ಗದರ್ಶನ ನೀಡಿ. ಶುಭಸಂಖ್ಯೆ: 6

ತುಲಾ: ಒತ್ತಡವನ್ನು ಉಪೇಕ್ಷಿಸಬೇಡಿ. ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಕ್ಷೇಮ. ಕಲಾವಿದರಿಗೆ ವಿಶೇಷ ಪೋ›ತ್ಸಾಹ. ಶುಭಸಂಖ್ಯೆ: 7

ವೃಶ್ಚಿಕ: ಉನ್ನತ ವ್ಯಕ್ತಿಗಳ ಭೇಟಿ. ವ್ಯಾಪಾರಕ್ಕೆ ಬಂಡವಾಳ ತೊಡಗಿಸುವಾಗ ಎಚ್ಚರ. ವಿದೇಶಕ್ಕೆ ಪ್ರಯಾಣ ಮಾಡಬೇಕಾದೀತು. ಶುಭಸಂಖ್ಯೆ:3

ಧನುಸ್ಸು: ಕಚೇರಿಯಲ್ಲಿ ಒತ್ತಡ ಹಾಗೂ ಸಂದಿಗ್ಧತೆಯ ವಾತಾವರಣ. ಪ್ರತಿಭಾನ್ವಿತರಿಗೆ ವಿಶೇಷ ಅವಕಾಶ ಪ್ರಾಪ್ತಿ. ಸಂಜೆ ಶುಭಸುದ್ದಿ. ಶುಭಸಂಖ್ಯೆ: 4

ಮಕರ: ಮುಂಗೋಪದಿಂದ ಹಾನಿಯಾದೀತು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಧಿಕ ಲಾಭ. ಅವಿವಾಹಿತರಿಗೆ ವಿವಾಹದ ಭರವಸೆ. ಶುಭಸಂಖ್ಯೆ:5

ಕುಂಭ: ನೂತನ ದಂಪತಿಗಳಿಗೆ ಶುಭ ಸುದ್ದಿ. ಮನೆಯ ಪರಿಸ್ಥಿತಿಯಲ್ಲಿ ಸುಧಾರಣೆ. ಸಂತಾನ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ. ಶುಭಸಂಖ್ಯೆ: 6

ಮೀನ: ಸಭ್ಯ ವರ್ತನೆಗೆ ಕಚೇರಿಯಲ್ಲಿ ಮೆಚ್ಚುಗೆ. ಅನಿರೀಕ್ಷಿತ ಸ್ನೇಹಿತನ ಭೇಟಿಯಿಂದ ಲಾಭ. ಸಹೋದ್ಯೋಗಿಗಳೊಂದಿಗೆ ವಿಹಾರ. ಶುಭಸಂಖ್ಯೆ: 9