ಮೇಷ: ತಾಪತ್ರಯಗಳು ದೂರವಾಗಿ ನೆಮ್ಮದಿ. ಗೆಳೆಯರೊಂದಿಗೆ ನಿಮ್ಮ ಸಂತೋಷವನ್ನು ಹಂಚಿಕೊಳ್ಳಿ. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 3
ವೃಷಭ: ಹಿತಮಿತ ಮಾತುಗಳಿಂದ ಜನಮನವನ್ನು ಗೆಲ್ಲುತ್ತೀರಿ. ಜನಪ್ರತಿನಿಧಿಗಳಿಗೆ, ಮುಂದಾಳುಗಳಿಗೆ ವಿಶೇಷ ದಿನ. ತಾಳ್ಮೆ ಇರಲಿ. ಶುಭಸಂಖ್ಯೆ: 7
ಮಿಥುನ: ನಿಮ್ಮ ಖಾಸಗಿ ಸಮಸ್ಯೆಯನ್ನು ಕುಟುಂಬದೊಂದಿಗೆ ಸಮಾಲೋಚಿಸಿ. ಪ್ರಮುಖ ವಿಷಯದಲ್ಲಿ ದೃಢ ನಿರ್ಧಾರ. ಶುಭಸಂಖ್ಯೆ: 9
ಕಟಕ: ನಕಾರಾತ್ಮಕ ಯೋಚನೆಯಿಂದ ದೂರವಿರಿ. ಹಳೇ ಯೋಜನೆಯನ್ನು ಕಾರ್ಯಗತ ಮಾಡಿಕೊಳ್ಳಿ ಆತ್ಮೀಯ ಬಂಧುವಿನ ಭೇಟಿ. ಶುಭಸಂಖ್ಯೆ: 8
ಸಿಂಹ: ನಿಮ್ಮ ಪ್ರತಿಭೆಗೆವಿಶೇಷ ಪುರಸ್ಕಾರ. ಮಿತಿಮೀರಿದ ಉತ್ಸಾಹದಿಂದ ತೊಂದರೆಯಾಗಬಹುದು. ಯೋಚಿಸಿ ಮುಂದುವರಿಯಿರಿ. ಶುಭಸಂಖ್ಯೆ: 1
ಕನ್ಯಾ: ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿದರೆ ಯಶಸ್ಸು. ಪ್ರಭಾವಿಗಳೊಂದಿಗೆ ನಿಮ್ಮ ಇತಿ-ಮಿತಿ ಗಳನ್ನು ಅರಿತು ಕೆಲಸ ನಿರ್ವಹಿಸಿ. ಶುಭಸಂಖ್ಯೆ: 6
ತುಲಾ: ಉದ್ದಿಮೆಗಳಿಗೆ ಸಂಬಂಧಿಸಿದಂತೆ ವಿಶೇಷ ವ್ಯಕ್ತಿಯ ಭೆೇಟಿ. ಅನಿರೀಕ್ಷಿತ ತಿರುವು. ಹಿರಿಯರ ಆರೋಗ್ಯದ ಕಡೆ ಗಮನಹರಿಸಿ. ಶುಭಸಂಖ್ಯೆ: 6
ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ಹಿಡಿತ ಇರಲಿ. ಗಮನಾರ್ಹವಾದ ಸಾಧನೆ ನಿಮ್ಮದಾಗಲಿದೆ. ದೂರದ ಪ್ರಯಾಣದ ಸಾಧ್ಯತೆ. ಶುಭಸಂಖ್ಯೆ: 7
ಧನಸ್ಸು: ಕುಟುಂಬದವರಿಗೆ ಭರವಸೆ ಮೂಡಿಸುವಿರಿ. ಚಲನಚಿತ್ರ ನಟರಿಗೆ ಅನಾರೋಗ್ಯದ ಸಾಧ್ಯತೆ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 2
ಮಕರ: ವಿಫಲವೆಂದುಕೊಂಡ ವ್ಯವಹಾರದಲ್ಲಿ ಅನಿರೀಕ್ಷಿತ ಯಶಸ್ಸು. ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣಕಾಸಿನ ಅಡಚಣೆ. ಶುಭಸಂಖ್ಯೆ: 7
ಕುಂಭ: ವಿದ್ಯಾಭ್ಯಾಗಳಿಗೆ ವಿಶೇಷ ಪ್ರಗತಿ. ಯೋಜಿತ ಕಾರ್ಯಗಳು ನಿರಾತಂಕವಾಗಲಿವೆ. ಉದರ ಸಂಬಂಧಿ ತೊಂದರೆ ಸಾಧ್ಯತೆ. ಶುಭಸಂಖ್ಯೆ: 5
ಮೀನ: ಯಾವುದೇ ವಿಷಯದ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ. ಬಟ್ಟೆ ವ್ಯಾಪಾರ ಆರಂಭಿಸುವವರಿಗೆ ಶುಭದಿನ. ಶುಭಸಂಖ್ಯೆ: 6