ಮೇಷ: ಉದ್ಯೋಗಸ್ಥ ಮಹಿಳೆಯರಿಗೆ ಶುಭ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಹಿರಿಯರ ಸಲಹೆಗಳನ್ನು ವಿನಯದಿಂದ ಸ್ವೀಕರಿಸಿ. ಶುಭಸಂಖ್ಯೆ: 3
ವೃಷಭ: ತರಕಾರಿ ವ್ಯಾಪಾರಿಗಳಿಗೆ ಉತ್ತಮ ದಿನ. ಸಾಲದ ಬಗ್ಗೆ ಎಚ್ಚರವಿರಲಿ. ಕಾರ್ಯ ನಿಮಿತ್ತ ದೂರಪ್ರಯಾಣ ಮಾಡಬೇಕಾದೀತು. ಶುಭಸಂಖ್ಯೆ: 9
ಮಿಥುನ: ನೆರೆಹೊರೆಯವರೊಂದಿಗೆ ಎಚ್ಚರದಿಂದ ಇರುವುದು ಕ್ಷೇಮ. ಕಾರ್ಖಾನೆ ಕೆಲಸಗಾರರಿಗೆ ಆದಾಯ. ಆರೋಗ್ಯದ ಕಾಳಜಿ ಇರಲಿ. ಶುಭಸಂಖ್ಯೆ: 3
ಕಟಕ: ಯಂತ್ರೋಪಕರಣಗಳಿಂದ ತೊಂದರೆ, ಹುಷಾರಾಗಿರಿ. ಉದ್ಯೋಗಾಕಾಂಕ್ಷಿಗಳಿಗೆ ಲಾಭ. ಕ್ರೀಡಾಪಟುಗಳಿಗೆ ಯಶಸ್ಸು. ಶುಭಸಂಖ್ಯೆ: 5
ಸಿಂಹ: ಆರೋಗ್ಯ ಕ್ಷೇತ್ರದ ಕೆಲಸಗಾರರಿಗೆ ವಿಶೇಷ ಆದಾಯ ಬರಲಿದೆ. ಧಾರ್ವಿುಕ ಸ್ಥಳಗಳಿಗೆ ಭೇಟಿ ನೀಡುವಿರಿ. ತಾಳ್ಮೆ ಅಗತ್ಯ. ಶುಭಸಂಖ್ಯೆ: 7
ಕನ್ಯಾ: ವೇದಿಕೆ ನಿರ್ವಹಣೆ ಉದ್ಯಮಿಗಳಿಗೆ ನಿರೀಕ್ಷೆಗಿಂತ ಹೆಚ್ಚು ಲಾಭ. ಅಧ್ಯಾತ್ಮದೆಡೆಗೆ ಒಲವು. ವಿದ್ಯಾಭ್ಯಾಸದಲ್ಲಿ ಪ್ರಗತಿ ಇದೆ. ಶುಭಸಂಖ್ಯೆ: 3
ತುಲಾ: ಎಲೆಕ್ಟ್ರಾನಿಕ್ಸ್ ವ್ಯಾಪಾರಸ್ಥರಿಗೆ ಉತ್ತಮ ಆದಾಯ. ಆಸ್ತಿ ಖರೀದಿಗೆ ಯೋಚನೆ ಮಾಡುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ. ಶುಭಸಂಖ್ಯೆ: 7
ವೃಶ್ಚಿಕ: ಪೂಜಾ ವಸ್ತು ಮಾರಾಟಗಾರರಿಗೆ ಅಭಿವೃದ್ಧಿ. ದಾಂಪತ್ಯದಲ್ಲಿ ಕಲಹ ಮತ್ತು ನೋವು. ಸಮಾಧಾನ ಮುಖ್ಯ. ಮಕ್ಕಳ ಬಗ್ಗೆ ಆತಂಕ. ಶುಭಸಂಖ್ಯೆ: 4
ಧನುಸ್ಸು: ಉದ್ದಿಮೆದಾರರಿಗೆ ಒಳ್ಳೆಯ ದಿನ. ಹಿತಶತ್ರುಗಳು ದೂರಾಗಿ ಮಾನಸಿಕ ನೆಮ್ಮದಿ. ದಾಂಪತ್ಯದಲ್ಲಿ ಸಂತೋಷದಾಯಕ ಕ್ಷಣಗಳು. ಶುಭಸಂಖ್ಯೆ: 6
ಮಕರ: ಔಷಧಿ ತಯಾರಕರಿಗೆ ಲಾಭ ಬರುವ ಸಮಯ. ಸಗಟು ವ್ಯಾಪಾರಸ್ಥರಿಗೆ ಬೇಡಿಕೆ ಹೆಚ್ಚಲಿದೆ. ಒತ್ತಡಗಳು ನಿವಾರಣೆಯಾಗಿ ಸಂತಸ. ಶುಭಸಂಖ್ಯೆ: 8
ಕುಂಭ: ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ ಕಾಡಲಿದೆ. ಸಾಲದಿಂದ ತೊಂದರೆ ಅನುಭವಿಸುವಿರಿ. ಅಪನಿಂದನೆಗಳು ನೆಮ್ಮದಿ ಕೆಡಿಸುತ್ತವೆ. ಶುಭಸಂಖ್ಯೆ: 2
ಮೀನ: ಕೃಷಿ ಬೀಜೋತ್ಪಾದನೆಗೆ ಬೇಡಿಕೆ. ದಾಂಪತ್ಯದಲ್ಲಿ ಸಮಸ್ಯೆಗಳು. ದುರ್ವಾರ್ತೆ ಕೇಳಬೇಕಾಗುವುದು. ಕೆಲಸ ಕಾರ್ಯಗಳಲ್ಲಿ ಸೋಲು. ಶುಭಸಂಖ್ಯೆ: 9