ನ್ಯೂಸ್

ಈ ರಾಶಿಯವರಿಗಿಂದು ಪ್ರಭಾವಿ ವ್ಯಕ್ತಿಗಳ ಸಂಪರ್ಕ: ನಿತ್ಯಭವಿಷ್ಯ

ಮೇಷ: ಉದ್ಯೋಗದಲ್ಲಿ ತೊಂದರೆ. ತಾಯಿಗೆ ಅನಾರೋಗ್ಯ, ವೈದ್ಯರ ಸಲಹೆ ಪಡೆದು ಮುನ್ನಡೆಯಿರಿ. ಬಾಡಿಗೆದಾರರಿಂದ ಕಿರಿಕಿರಿ. ಶುಭಸಂಖ್ಯೆ: 9

ವೃಷಭ: ಸಹೋದರಿಯಿಂದ ಲಾಭ. ಮನೆಯಲ್ಲಿ ಸಮಾರಂಭದ ಸಡಗರ. ಆತ್ಮ ಗೌರವಕ್ಕೆ ಧಕ್ಕೆ ತರುವ ಘಟನೆ. ಸಹನೆ ಕಳೆದುಕೊಳ್ಳಬೇಡಿ. ಶುಭಸಂಖ್ಯೆ: 3

ಮಿಥುನ: ಅನಾರೋಗ್ಯದಿಂದ ಕೆಲಸ ಹೋಗುವ ಭೀತಿ. ನ್ಯಾಯಾಲಯದ ವಿವಾದಕ್ಕೆ ರ್ತಾಕ ಅಂತ್ಯ. ಸಹೋದರರೊಂದಿಗೆ ಘರ್ಷಣೆ. ಶುಭಸಂಖ್ಯೆ:7

ಕಟಕ: ತೀರ್ಥಯಾತ್ರೆಯಿಂದ ಮನಸ್ಸಿಗೆ ಸಮಾಧಾನ. ವಿದೇಶ ಪ್ರಯಾಣದ ಕನಸು ಸಾಕಾರ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶ ಸಿಗಲಿದೆ. ಶುಭಸಂಖ್ಯೆ: 7

ಸಿಂಹ: ಸಂತಾನಕ್ಕೆ ಅಡ್ಡಿಯಾಗಿದ್ದ ದೋಷ ಪರಿಹಾರವಾಗಿ ಸಂತೋಷ. ಮೇಲಧಿಕಾರಿಗಳಿಂದ ಒತ್ತಡ. ಸರ್ಕಾರಿ ಕೆಲಸಗಳಲ್ಲಿ ವಿಲಂಬ. ಶುಭಸಂಖ್ಯೆ: 2

ಕನ್ಯಾ: ಪಿತ್ರಾರ್ಜಿತ ಆಸ್ತಿ ವಿವಾದ ಮುಗಿದು ಮಾನಸಿಕ ನೆಮ್ಮದಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಮಕ್ಕಳಿಂದ ಚಿಂತೆ ಉಂಟಾದೀತು. ಶುಭಸಂಖ್ಯೆ: 6

ತುಲಾ: ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಸ್ಥಿರಾಸ್ತಿ ವಿವಾದ ನ್ಯಾಯಾಲಯಕ್ಕೆ. ಖರೀದಿಯಲ್ಲಿ ವಂಚನೆಯಾದೀತು, ಎಚ್ಚರ. ಶುಭಸಂಖ್ಯೆ: 5

ವೃಶ್ಚಿಕ: ಮೋಜು ಮಸ್ತಿಯಿಂದ ಸಮಸ್ಯೆ. ಅವಿವಾಹಿತರಿಗೆ ಶುಭ ಯೋಗ. ಅನಿರೀಕ್ಷಿತ ಘಟನೆ. ಅನವಶ್ಯಕ ಖರ್ಚು ತಲೆದೋರಬಹುದು. ಶುಭಸಂಖ್ಯೆ:4

ಧನುಸ್ಸು: ಷೇರು ವ್ಯವಹಾರದಲ್ಲಿ ಲಾಭ. ನಿವೇಶನ ಹೊಂದುವ ಕನಸು ನನಸು. ಶುಭ ಸಮಾರಂಭಕ್ಕೆ ಚಾಲನೆ. ಕೃಷಿ ಸಲಕರಣೆ ಖರೀದಿ. ಶುಭಸಂಖ್ಯೆ: 8

ಮಕರ: ಅಹಂ ಭಾವದಿಂದ ಅವಮಾನ. ಸ್ನೇಹಿತನ ಭೇಟಿ. ಮಹಿಳಾ ಉದ್ಯೋಗಿಗಳಿಗೆ ತೊಂದರೆ. ಸಗಟು ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 6

ಕುಂಭ: ವಾಹನದಿಂದ ತೊಂದರೆ. ನ್ಯಾಯಾಲಯದ ವಿವಾದದಲ್ಲಿ ಸೋಲು ಉಂಟಾಗಿ ಮಾನಸಿಕ ವೇದನೆ. ವಿದ್ಯಾರ್ಥಿಗಳಿಗೆ ಅಡೆತಡೆ. ಶುಭಸಂಖ್ಯೆ: 2

ಮೀನ: ಧರ್ಮಕಾರ್ಯಗಳಲ್ಲಿ ಅನಾಸಕ್ತಿ. ದೂರ ಪ್ರಯಾಣ ಸಾಧ್ಯತೆ. ವ್ಯವಸಾಯಗಾರರಿಗೆ ಶುಭದಿನ. ವಂಚನೆಗೆ ಒಳಗಾಗುವ ಸಾಧ್ಯತೆ. ಶುಭಸಂಖ್ಯೆ: 9