ಮೇಷ: ನಿಮ್ಮ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಬಾಂಧವ್ಯ ವೃದ್ಧಿ. ಹಿರಿಯರ ಹಾರೈಕೆ. ಶುಭಸಂಖ್ಯೆ: 9
ವೃಷಭ: ಸಾಂಸಾರಿಕ ಗೊಂದಲಗಳನ್ನು ತಾಳ್ಮೆಯಿಂದ ಬಗೆಹರಿಸಿ. ಧನಾತ್ಮಕ ಚಿಂತನೆಯನ್ನು ಮಾಡಿ. ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 1
ಮಿಥುನ: ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಲಿದೆ. ಸಹವರ್ತಿಗಳಿಂದ ಕಿರಿಕಿರಿ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 5
ಕಟಕ: ನಿರುದ್ಯೋಗಿಗಳಿಗೆ ಆಕಸ್ಮಿಕವಾಗಿ ಉದ್ಯೋಗ ಪ್ರಾಪ್ತಿ. ಲೋಹಗಳ ವ್ಯಾಪಾರಸ್ಥರಿಗೆ ಅಧಿಕ ಲಾಭ. ಸಾಲಗಾರರಿಂದ ತೊಂದರೆ. ಶುಭಸಂಖ್ಯೆ: 7
ಸಿಂಹ: ಅನವಶ್ಯಕ ತಿರುಗಾಟ. ಕಾರ್ಯದಲ್ಲಿ ವಿಫಲತೆ. ಸ್ವಂತಗ್ರಾಮಕ್ಕೆ ಭೇಟಿ. ಕೃಷಿಕರಿಗೆ ವಿಶೇಷ ಲಾಭ. ಭೂ ವಿವಾದಕ್ಕೆ ಅಂತ್ಯ. ಶುಭಸಂಖ್ಯೆ: 7
ಕನ್ಯಾ: ಅನಿರೀಕ್ಷಿತವಾಗಿ ಧನಲಾಭ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ನಿಮ್ಮ ಗುಣಗಾನ. ಸಹೋದ್ಯೋಗಿಗಳಿಂದ ಕಿರಿಕಿರಿ. ಶುಭಸಂಖ್ಯೆ: 3
ತುಲಾ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು. ಉನ್ನತ ವಿದ್ಯಾಭ್ಯಾಸ ಪೂರ್ಣ. ಸಂಗಾತಿಯೊಂದಿಗೆ ವಿರಸ. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 2
ವೃಶ್ಚಿಕ: ಮನೆ ಬದಲಾವಣೆ ಸಾಧ್ಯತೆ. ಭೂವಿವಾದದ ತೀರ್ಪ, ನಿರಾಸೆ. ಕುಟುಂಬದೊಂದಿಗೆ ಸಮಾಲೋಚನೆ. ಸಂಜೆ ಶುಭವಾರ್ತೆ. ಶುಭಸಂಖ್ಯೆ: 6
ಧನುಸ್ಸು: ಕೆಲವೊಂದು ಘಟನೆಗಳು ಸಹನೆ ಪರೀಕ್ಷಿಸಲಿವೆ. ಸಾರ್ವಜನಿಕವಾಗಿ ಗೌರವ. ಸ್ನೇಹಿತನಿಂದ ಸಮಾಧಾನ. ದಿನಾಂತ್ಯ ಉತ್ತಮ. ಶುಭಸಂಖ್ಯೆ: 8
ಮಕರ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿಯಿಂದ ಸಮಸ್ಯೆ. ಕಚೇರಿಯಲ್ಲಿ ಸಹೋದ್ಯೋಗಿ ಮೇಲೆ ಅಸಮಾಧಾನ. ಸ್ತ್ರೀಯರಿಂದ ಸಹಾಯ. ಶುಭಸಂಖ್ಯೆ: 5
ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷ ದಿನ. ಧಾರ್ವಿುಕ ಮಂದಿರಕ್ಕೆ ಭೇಟಿ. ಹಳೆಯ ಸ್ನೇಹಿತೆಯ ಭೇಟಿ. ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 6
ಮೀನ: ಪಾಲುದಾರಿಕೆ ವ್ಯವಹಾರದಲ್ಲಿ ಮೋಸ. ಹಣಕಾಸಿನ ವಿಚಾರದಲ್ಲಿ ಹಿರಿಯರ ಸಲಹೆ ತೆಗೆದುಕೊಳ್ಳಿ. ಮನೆ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 4